ಮಸೂತಿ ಸಂಗನಬಸವ ಶಾಲೆಯಲ್ಲಿ ಯೋಗ ದಿನಾಚರಣೆ
ಕೊಲ್ಹಾರ:ಜೂ.22:ಬಾಲ್ಯ ವಯಸ್ಸಿನಲ್ಲಿಯೇ ಯೋಗ ಕಲಿಕೆ ಮತ್ತು ಅಭ್ಯಾಸ ಅರೋಗ್ಯ ಮತ್ತು ಮನಸ್ಸಿಗೆ ತುಂಬಾ ಒಳ್ಳೆಯದು ಎಂದು ಸಹಶಿಕ್ಷಕ ಜಗದೀಶ ಸಾಲಳ್ಳಿ ಹೇಳಿದರು .
ಮಸೂತಿ ಗ್ರಾಮದ ಶ್ರೀ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿವಿಧ ಯೋಗ ಆಸನಗಳನ್ನು ಪ್ರದರ್ಶಿಸಿ ಅದರ ಉಪಯೋಗವನ್ನು ತಿಳಿಸಿ ಮಾತನಾಡಿದರು.
ಯೋಗ ಮಾಡುವುದರಿಂದ ಮಾನಸಿಕ ಖಿನ್ನತೆ, ಆಯಾಸ, ಆತಂಕ ದೂರವಾಗಿ ಏಕಾಗ್ರತೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಉತ್ಸಾಹಬರಿತ ಜೀವನಕ್ಕೆ ಪ್ರೇರಣೆ ನೀಡುತ್ತದೆ ಎಂದರು.ಮಕ್ಕಳು ಪ್ರತಿನಿತ್ಯ ಯೋಗ, ಪ್ರಾಣಾಯಾಮ,ಧ್ಯಾನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಸಿ ಎ ಗೂಗಿಹಾಳ ಸಹಶಿಕ್ಷಕರಾದ ಎಚ್ ಎಸ್ ತಳವಾರ,ಎಂ ಎಚ್ ನಾಯಕ,ಎಸ್ ಆಯ್ ಅಮರಖೇಡ ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು.