ವಟಸಾವಿತ್ರಿ ವೃತದಿಂದ ಮುತೈದೆತನದ ಭಾಗ್ಯ:ಗುಂಡಕನಾಳಶ್ರೀ
ತಾಳಿಕೋಟೆ:ಜೂ.22: ವಟ ಸಾವಿತ್ರಿ ವೃತವೆಂಬುದು ವಿಶೇಷವಾಗಿ ಮಧ್ಯಪ್ರದೇಶ ಮಹಾರಾಷ್ಟ್ರದಲ್ಲಿ ಆಚರಿಸಲಾಗುತ್ತದೆ ಜೇಷ್ಠಮಾಸದ ಸುಕ್ಲಪಕ್ಷದ ವಟಪೂರ್ಣಮಿ ದಿನದಂದು ಕರ್ನಾಟಕದಲ್ಲಿ ಆಚರಿಸಲಾಗುತ್ತದೆ ಗುಜರಾತ, ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಜೇಷ್ಠ ಮಾಸ ಪ್ರಾರಂಭಕ್ಕೆ ಪ್ರಾರಂಭಿಸಲಾಗುತ್ತದೆ ಭಾರತದಲ್ಲಿ ಕಾರಣ ಕಾರ ಹುಣ್ಣಮೆಯ ದಿನದಂದು ಮಾಡಲಾಗುತ್ತದೆ ಕಾರಣ ವಟ ಅಂದರೆ ಆಲದ ಮರ ಆಲದ ಮರದ ಹೆಚ್ಚಾದಂತಹ ಆಯುಷ್ಯ ಆರೋಗ್ಯ ತಮ್ಮ ಪತಿಗೆ ದಯಪಾಲಿಸಲಿ ಎಂಬ ಉದ್ದೇಶ ಹೊತ್ತು ದಿರ್ಘಸುಮಂಗಲೆಯರಾಗಿ ಬಾಳಬೇಕೆಂಬ ಉದ್ದೇಶದಿಂದ ಈ ಮಹಾ ಪೂಜೆಯನ್ನು ಸುಮಂಗಲೆಯರು ಗೈಯಲಾಗುತ್ತದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹಾಗೂ ಖ್ಯಾತ ಜ್ಯೋತಿಷ ಶಾಸ್ತ್ರ ಪಂಡಿತ ವಸಂತ ಜೋಶಿ ಅವರು ಹೇಳಿದ್ದಾರೆ.
ಹಿಂದಿನ ಕಾಲದಲ್ಲಿ ಸತಿ ಸಾವಿತ್ರಿ ಎಂಬ ಮಹಿಳೆ ತನ್ನ ಪತಿಯ ಪ್ರಾಣ ತೆಗೆದ ಯಮನ ಹತ್ತಿರ ಹೋಗಿ ತನ್ನ ಪಾವಿತ್ರತೆಯ ತನದಿಂದ ಪತಿಯ ಹೋದ ಪ್ರಾಣವನ್ನು ಮರಳಿ ತಂದು ಬಧುಕಿಸಿದ್ದ ಕಾರಣದಿಂದಲೇ ಪ್ರಾಚೀನ ಕಾಲದಿಂದಲೂ ಈ ವಟ ಸಾವಿತ್ರಿ ವೃತವನ್ನು ಭಕ್ತಿಭಾವದಿಂದ ಸುಮಂಗಲೆಯರು ಆಚರಿಸುತ್ತಾ ಸಾಗಿಬಂದಿದ್ದಾರೆಂದು ತಿಳಿಸಿದ್ದಾರೆ.
ವಟ ಅಂದರೆ ಆಲದ ಮರ ಆಲದ ಮರಕ್ಕೆ ಸುರಗಿ ಸುತ್ತುವ ಕಾರ್ಯ ನಡೆಸಿ ತಮ್ಮ ಪತಿಗೆ ಅಷ್ಠೇ ಅಲ್ಲಾ ತಮ್ಮ ಮಕ್ಕಳ ಆಯುಷ್ಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವ ಕುರಿತು ಸುಮಂಗಲೆಯರು ಈ ವಟ ಪೂರ್ಣಿಮಾ ವೃತವನ್ನು ಭಕ್ತಿ ಭಾವದಿಂದ ಆಚರಿಸುತ್ತಾರೆಂದು ತಿಳಿಸಿದ್ದಾರೆ.
ಸತ್ಯವಾನ ಎಂಬ ಸತಿ ಸಾವಿತ್ರಿ ಪತಿಗೆ ಒಂದು ಅದ್ಭುತ್ ರೋಗ ತಗುಲಿ ಅದು ಉಲ್ಬಣಗೊಂಡು ಮರಣ ಹೊಂದುತ್ತಾನೆ ಪತಿವೃತೆಯಾದ ಸತಿ ಸಾವಿತ್ರಿ ತನ್ನ ಪತಿಯ ಜೀವ ತೆಗೆದುಕೊಂಡು ಹೋಗುವದನ್ನು ಅರೀತು ಆ ಯಮನ ಬೆನ್ನು ಹತ್ತಿ ತನ್ನ ಭಕ್ತಿಯನ್ನು ಸಮರ್ಪಣೆ ಮಾಡುತ್ತಾ ಪರಮೇಶ್ವರನ ಆಶಿರ್ವಾದದಿಂದ ಪತಿಯ ಜೀವ ಉಳಿಸುತ್ತಾಳೆ, ಎಂಬ ಪ್ರತೀತಿಯಲ್ಲಿದ್ದ ಈ ಇತಿಹಾಸದ ಅನ್ವಯ ಸಾವಿತ್ರಿ ಚಿತ್ರ ಬರೆದು ಮನೆ ಮನೆಯಲ್ಲಿ ಪೂಜೆಗೈಯಲಾಗುತ್ತದೆ ಅಲ್ಲದೇ ಮನೆಯಲ್ಲಿಯೂ ಕಂಕಣ ಭಾಗ್ಯ ಕೂಡಿಬರಲಿ ಸುಖಃ ಶಾಂತಿ ಲಬಿಸಲಿ ಎಂದು ಸುಮಂಗಲೆಯರು ಭಕ್ತಿಭಾವದಿಂದ ಶುಕ್ರವಾರರಂದು ತಾಳಿಕೋಟೆಯ ಬಜಾರ ಶ್ರೀ ಹನುಮಾನ ದೇವರ ಮಂದಿರದಲ್ಲಿದ್ದ ಬೃಹತ್ ಆಕಾರದ ಆಲದ ಮರಕ್ಕೆ ಅಸಂಖ್ಯಾತ ಸುಮಂಗಲೆಯರು ಆಗಮಿಸಿ ಮಹಾ ಪೂಜೆ ಗೈದು ಭಕ್ತಿಭಾವ ಮೆರೆದಿದ್ದೇನು ಕಡಿಮೇನಿಲ್ಲಾ.
ಈ ಸಮಯದಲ್ಲಿ ಬಜಾರ ಹನುಮಾನ ಮಂದಿರದ ಅರ್ಚಕರು ಹಾಗೂ ಸುಮಂಗಲೆಯರು ಪಾಲ್ಗೊಂಡು ಪ್ರತಿವರ್ಷದಂತೆ ವೃತ ಆಚರಣೆ ಗೈದರು.