ಯೋಗಾಭ್ಯಾಸದಿಂದ ರೋಗಗಳು ದೂರ:ಪಾಟೀಲ
ತಾಳಿಕೋಟೆ:ಜೂ.22: ಪಟ್ಟಣದ ಶ್ರೀ ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಯೋಗ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್ .ಪಾಟೀಲ ಅವರು ವಿಧ್ಯಾರ್ಥಿಗಳೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಯೋಗ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಸಚಿನ. ಎಚ್. ಪಾಟೀಲ. ಕಿರಣ. ಎಚ್ ಪಾಟೀಲ, ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಮ್.ಎಸ್ ರಾಯಗೊಂಡ, ಬಿಪಿಇಡಿ ಉಪನ್ಯಾಸಕರಾದ ಅಮರೇಶ ನಾಗರಾಳ, ಶರಣು ಬಿರಾದಾರ, ಎಸ್ ಬಿ ಮಂಗ್ಯಾಳ, ಮತ್ತು ಶ್ರೀ ಎಚ್ ಎಸ್ ಪಾಟೀಲ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಹಾಗೂ ಪ್ರಾಚಾರ್ಯರಾದ ಶ್ರೀಮತಿ ಎಮ್. ಎಸ್. ಬಿರಾದಾರ, ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಜೆ.ಎಮ್ ಕೊಣ್ಣುರ, ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಬಿ.ಆಯ್ ಹಿರೇಹೊಳಿ ಹಾಗೂ ಎಸ್.ಎಸ್ ವಿದ್ಯಾಸಂಸ್ಥೆಯ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಾಗಿದ್ದರು.
ಬಿಪಿಇಡಿ ಪ್ರಶಿಕ್ಷಣಾರ್ಥಿಯಾದ ಮಂಜು ಬಿರಾದಾರ ಅವರು ಸೂರ್ಯ ನಮಸ್ಕಾರ, ತಾಡಾಸನ, ವೃಕ್ಷಾಸನ, ತ್ರಿಕೋನಾಸನ, ಪಶ್ಚಿಮೋತ್ತಾಸನ, ವಜ್ರಾಸನ, ಗೋಮುಖಾಸನ, ಪದ್ಮಾಸನ, ಲೋಲಾಸನ, ಪ್ರಾಣಾಯಾಮ, ಶವಾಸನ. ಈ ರೀತಿ ಅನೇಕ ಆಸನಗಳನ್ನು ಮಾಡಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರು ಮಾತನಾಡಿ ಯೋಗವೆಂಬುದು ಮನುಷ್ಯನ ಆಯಾಮದಲ್ಲಿ ಅತೀ ಮಹತ್ವ ಪಡೆದುಕೊಂಡಿದ್ದು ಯೋಗದಿಂದ ರೋಗ ಮುಕ್ತರಾಗುತ್ತಾರೆ ಭಾರತೀಯರಲ್ಲಿದ್ದ ಯೋಗವು ಇಂದು ವಿಶ್ವದೆಲ್ಲಡೆ ಆಚರಿಸುವಂತಾಗಿದೆ ಯೋಗಕ್ಕೆ ದೊಡ್ಡ ಶಕ್ತಿ ಇದ್ದು ಪ್ರತಿ ದಿನ 1 ಗಂಟೆ ವಿಧ್ಯಾರ್ಥಿಗಳು ಮತ್ತು ಎಲ್ಲ ಶಿಕ್ಷಕರು ಯೋಗಾಭ್ಯಾಸ ಮಾಡಿದರೆ ಇದರ ಪ್ರತಿಫಲ ಒಂದೇ ವಾರದಲ್ಲಿ ತಿಳಿದು ಬರಲಿದ್ದು ಎಂತಹದ್ದೇ ರೋಗವಿದ್ದರೂ ಅದನ್ನು ಹೊರ ಹಾಕುವಂತಹ ಶಕ್ತಿ ಇದಕ್ಕೆ ಇದೆ ಪ್ರತಿಯೊಂದು ಅಂಗಾಂಗಗಳಿಗೆ ಒಂದೊಂದು ಆಸನಗಳು ಇರವವು. ಪ್ರತಿ ದಿನ ಎಲ್ಲರೂ ಯೋಗ ಮಾಡುವುದರಿಂದ ನಾವೆಲ್ಲರೂ ನಿರೋಗಿಗಳಾಗುವೆವು ಎಂದು ಯೋಗದಿಂದಾಗುವ ಲಾಭಗಳನ್ನು ವಿವರಿಸಿದರು.