ಯೋಗ ಕಾರ್ಯ ನಿರಂತರವಿರಲಿ:ರೇವಣಸಿದ್ದಯ್ಯ
ಕೆಂಭಾವಿ:ಜೂ.22:ಯೋಗಾಭ್ಯಾಸವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತ ಮಾಡದೆ
ನಿರಂತರ ಯೋಗಭ್ಯಾಸದಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಯೋಗದಿಂದ ರೋಗ ಮುಕ್ತಿ ಹೊಂದಲು ಸಾಧ್ಯ ಎಂದು ಮುಖ್ಯ ಶಿಕ್ಷಕ ರೇವಣಸಿದ್ದಯ್ಯ ಮಠ ಹೇಳಿದರು.
ಪಟ್ಟಣದ ಸ್ಪಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಿ ಮಾತನಾಡಿದರು. ಕೆಲಸದ ಒತ್ತಡ ಹಾಗೂ ಆಧುನಿಕ ಆಹಾರ ಸೇವನೆ ಕ್ರಮದಿಂದ ಉಂಟಾಗುವ ಮಧುಮೇಹ, ರಕ್ತದೊತ್ತಡ ಮೊದಲಾದ ರೋಗಗಳ ಉಪಶಮನಕ್ಕೆ ಯೋಗ ಸಂಜೀವಿನಿಯಾಗಿ ಅತ್ಯಂತ ಪರಿಣಾಮಕಾರಿಯಾಗಿದೆ. ಕೇವಲ ಒಂದು ದಿನಕ್ಕೆ ಯೋಗವನ್ನು ಸೀಮಿತಗೊಳಿಸದೆ ಪ್ರತಿಯೊಬ್ಬರು ದಿನದ ಒಂದು ಗಂಟೆಯಾದರೂ ಯೋಗಕ್ಕೆ ಮೀಸಲಿಡಬೇಕು ಎಂದು ತಿಳಿಸಿದರು.
ಶಿಕ್ಷಕಿಯರಾದ ರೋಹಿಣಿ ಗುಬ್ಯಾಡ, ಲತಾ ಕೊಣ್ಣುರ, ಶ್ರೀದೇವಿ ಪಾಟೀಲ, ಮಾಸಾಬಿ, ಶಾರದಾ ವಸ್ತ್ರದ, ಅಶ್ವಿನಿ,ಮಿತಾ, ಜರನಾ, ಸುಷ್ಮಾ, ಪಾರ್ವತಿ, ಎಸ್‍ಕೆ ನಾಜ, ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.