ಯೋಗ ಮಾಡಿ ಆರೋಗ್ಯವಂತ ಸ್ವಾಸ್ಥ್ಯ ದೇಶ ಕಟ್ಟಿ: ಡಾ. ಮಂಜುನಾಥ ಕೊಟ್ಟೇಣ್ಣವರ್
ಇಂಡಿ:ಜೂ.22:ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ಯ ಸ್ಟೇಶನ ರಸ್ತೆಯಲ್ಲಿರುವ ಪ್ರದೀಪ ಮುರಗುಂಡಿಯವರ ತೋಟದ ವಸ್ತಿಯಲ್ಲಿ 1989-90ನೇ ಸಾಲಿನ ಶ್ರೀಶಾಂತೇಶ್ವರ ಹೈಸ್ಕೋಲ ಗೆಳೆಯರ ಬಳಗದ ವತಿಯಿಂದ ವಿಶ್ವ ಯೋಗದಿನ ಆಚರಿಸಲಾಯಿತು.
ಈ ಸಂಧರ್ಬದಲ್ಲಿ ಯೋಗ ಕಾರ್ಯಕ್ರಮ ಉದ್ಘಾಟಿಸಿ ಬಿ.ಎಲ್.,ಡಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಟ್ಠೇಣ್ಣವರ್ ಮಾತನಾಡಿ ಯೋಗ ಭಾರತದ ಸನಾತನ ಕೋಡುಗೆ ಪ್ರಾಚೀನ ಕಾಲದ ಖುಷಿ ಮುನಿಗಳು ಯೋಗದಿಂದ ಆಯಸ್ಸು ಹೆಚ್ಚಿಸಿಕೊಳ್ಳುತ್ತಿದ್ದರು. ಮನಸ್ಸು ,ದೇಹ, ಚಿಂತನೆ, ಸಯಂ ಯೋಗದಿಂದ ಎಕಾಗ್ರತೆ ಮಾಡುತ್ತದೆ. ಯೋಗ ಪ್ರಕೃತಿ ಮತ್ತು ಮನುಷ್ಯರ ಮಧ್ಯ ಸಾಮರಸ್ಯ ಉಂಟು ಮಾಡುತ್ತದೆ. ಸರ್ವಜ್ಞ ಹೇಳಿದಂತೆ ಉಂಡು ಮೂರಡಿ ಶತ ಪಥ ನಡೆದು ಎಡ ಮಗ್ಗಲ್ಲಲ್ಲಿ ಮಲಗಿದರೆ ವೈದ್ಯರ ಬಂಡಾಟವಿಲ್ಲ ಎಂದಿದ್ದಾರೆ. ಸಾಮಾಜ್ಯ ಸ್ವಾಸ್ಥ್ಯ ಆರೋಗ್ಯವಂತ ದೇಶ ಕಟ್ಟಲು ಯೋಗ ಪ್ರಮುಖ ಸಾಧನ ಆದ್ದರಿಂದ ಪ್ರತಿಯೋಬ್ಬರು ಪ್ರತಿ ನಿತ್ಯ ಯೋಗ ಮಾಡಿ ನಿರೂಗಿಯಾಗಿ ಎಂದರು.
ಆಯುಷ್ಯ ವೈದ್ಯರಾದ ಡಾ ಸತ್ಯಪ್ರಮೋದ ಕುಲಕರ್ಣಿ ಯಾವುದೇ ಫಲಾಪೇಕ್ಷೆ ಇಲ್ಲದೆ ಪಾಟೀಲ ಗುರುಗಳು ಯೋಗಭ್ಯಾಸ ಮಾಡಿಸುತ್ತಿರುವ ಕಾರ್ಯ ಶ್ಲ್ಯಾಗನೀಯ, ಸದಾ ಕ್ರೀಯಾಶೀಲರಾಗಿರುವ ಯೋಗ ಗುರು ಇವರು ಸಾಮಾಜಿಕ ಕಾರ್ಯಗಳಿಗೆ ಎಂದಿಗೂ ಹಿಂಜರಿಯುವುದಿಲ್ಲ ಸ್ವಾಶ್ತ್ಯ ಸಮಾಜ ಕಟ್ಟುವಲ್ಲಿ ಇವರ ಶ್ರಮ ಅಪಾರವಾಗಿದೆ ಎಂದರು.
ರೈತ ಕೃಷ್ಣ ಆದ್ಯ, ಶ್ರೀಶಾಂತೇಶ್ವರ ಗೆಳೆಯರ ಬಳಗ ಪ್ರತಿವರ್ಷ ವಿನೂತ ರಾಷ್ಟ್ರೀಯ ಹಬ್ಬ ಹರಿದಿನಗಳು ಆರೋಗ್ಯ, ಪರಿಸರ,ಯೋಗ ಇಂತಹ ಅನೇಕ ದಿನಾಚರಣೆಗಳನ್ನು ಮಾಡುವ ಮೂಲಕ ಸಮಾಜಿಕ ಕಾರ್ಯಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಯೋಗಗುರು ಬಿ,ಎಸ್ ಪಾಟೀಲ ಯೋಗ ಕುರಿತು ಮಾತನಾಡಿದರು.
ಶಿಕ್ಷಕ ದಶರಥ ಕೋರಿ, ಉಮೇಶ ಕುಲಕರ್ಣಿ, ಮುತ್ತುರಾಜ ಅಡಿಗ, ಶಾಂತು ಧನಶೆಟ್ಟಿ, ಬಸವರಾಜ ಚೌದರಿ, ಸುರೇಶ ಅವರಾಧಿ, ರಮೇಶ ಕುಲಕರ್ಣಿ, ಚಂದನ ಧನಪಾಲ,ರವಿ ನಾಯಿಕ, ಮಹಾದೇವ ನಿಂಗಾರಿ, ಉಮೇಶ ಶಿವಯೋಗಿಮಠ, ಗಂಗಾಧರ ಪೂಜಾರಿ, ಪ್ರದೀಪ ಮುರಗುಂಡಿ,ಹುಸೇನಿ ಮಕಾನದಾರ ಸೇರಿದಂತೆ 50ಕ್ಕಿಂತ ಅಧಿಕ ಶಾಂತೇಶ್ವರ ಹೈಸ್ಕೋಲ ಗೆಳೆಯರ ಬಳಗ ಯೋಗ ಶಿಬೀರದಲ್ಲಿದ್ದರು.
ಶಿಕ್ಷಕ ದಶರಥ ಕೋರಿ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.