ಯೋಗ ದಿನಾಚರಣೆ ಆಚರಣೆ
ಕಲಬುರಗಿ:ಜೂ.22: ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಅರುಣಕುಮಾರ ಮಾಶೆಟ್ಟಿ ಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಶಾಲೆಯ ವಿದ್ಯಾರ್ಥಿಗಳಿಗೆ ಯೋಗಾಸನ ಮಾಡುವದರ ಉಪಯೋಗ ಹಾಗೂ ಅದರಿಂದ ಆಗುವ ಲಾಭಗಳ ಬಗ್ಗೆ ಸವಿವರವಾಗಿ ತಿಳಿಸಿದ್ದಲ್ಲದೆ, ಯೋಗಾಸನದಲ್ಲಿರುವ ಪ್ರಮುಖವಾದ ಕೆಲವು ಆಸನಗಳನ್ನು ಮಾಡಿ, ವಿದ್ಯಾರ್ಥಿಗಳಿಗೂ ಯೊಗಾಸನ ಮಾಡಿಸಿದರು. ಶಾಲೆಯ ಪ್ರಾಂಶುಪಾಲರಾದ ಪ್ರಮೋದ ಎಸ್ ಮಳೇಕರ ಅವರು ಮುಖ್ಯ ಅತಿಥಿಗಳಿಗೆ ಗೌರವ ಸಮರ್ಪಣೆ ಮಾಡುವುದರ ಮೂಲಕ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಪೂರ್ಣಗೊಂಡಿತು.