ಎನ್ ವಿಯಲ್ಲಿ ಯೋಗ ದಿನಾಚರಣೆ
ಕಲಬುರಗಿ:ಜೂ.22: ನೂತನ ವಿದ್ಯಾಲಯ ಸಂಸ್ಥೆ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನೂತನ ವಿದ್ಯಾಲಯ ಕ್ರೀಡಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು
ಸಂಸ್ಥೆ ಅಧ್ಯಕ್ಷರಾದ ಡಾ. ಗೌತಮ್ ಜಾಗಿರದಾರ ಅವರು ಯೋಗಕ್ಕೆ ಸಸಿಗೆ ನೀರು ಹಾಕುವುದರ ಮುಖಾಂತರ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಭಿಜಿತ್ ಎ ದೇಶಮುಖ, ಕ್ರೀಡಾ ಸಮಿತಿಯ ಚೇರ್ಮನ್ ಡಾ. ಎಸ್ ಎಸ್ ಸಿದ್ದಾಪುರಕಾರ್, ಟ್ರಸ್ಟ್ ಸದಸ್ಯ ರವೀಂದ್ರ ಟೆಂಗಲಿ, ಸುಹಾಸ್ ಖಾನಗೆ, ದೀಪಕ, ಸಂತೋಷ ಕೋಬಾಳ್, ನರೇಂದ್ರ ಲಿಂಗರಾಜ್, ಸುನೀತಾ, ಮಲ್ಲಮ್ಮ, ವಿಜಯಕುಮಾರ್ ಎ ಕೃಷ್ಣ, ಆರ್ ವಾಸುದೇವ್, ವಿಶ್ವರದ್ಯ, ರಾಜಕುಮಾರ್ ಕಾಳೆ ಹಾಗೂ ಸಂಸ್ಥೆಯ ಎಲ್ಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ದೈಹಿಕ ಶಿಕ್ಷಕರು ಕಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.