ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ತಾಳಿಕೋಟೆ:ಜೂ.22: ಪಟ್ಟಣದ ವಿ ಪಿ ಎಮ್ ಸೆಕ್ರೇಡ್ ಹಾರ್ಟ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸು ರೇಖಾ ಸಾಲಂಕಿ ಅವರು ಮಾತನಾಡಿ ಯೋಗವು ಮನುಷುನ ದೆಹದಲ್ಲಿರುವ ಎಲ್ಲ ಅಂಗಾಗಳನ್ನು ಸರಿದಾರಿಗೆ ತರುವ ಶಕ್ತಿ ಅದರಲ್ಲಿ ಅಡಗಿದೆ ಯೋಗವನ್ನು ಪ್ರತಿದಿನ ಎಲ್ಲರೂ ರೂಡಿಸಿಕೊಂಡು ಮಾಡಬೇಕು ಇದರಿಂದ ಮಾನಸಿಕತೆ ದೂರಾಗಲಿದೆ ಅಲ್ಲದೇ ಸದೃಢ ದೇಹವನ್ನು ಹೊಂದಲು ಸಾಧ್ಯವಾಗಲಿದೆ ಎಂದರು.
ಇನ್ನೋರ್ವ ಅತಿಥಿ ಶ್ರೀಮತಿ ರತ್ನಕಲಾ ಸಾಲಂಕಿ ಅವರು ಯೋಗದಿಂದ ಆಗುವ ಲಾಭಗಳ ಕುರಿತಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ರಾಬರ್ಟ್ ಕ್ರಾಪ್ಟಾ (ವಿ ಪಿ ಎಮ್ & ಎಸ್ ಎಚ್ ಮ್ಯಾನೇಜರ್) ಹಾಗೂ ಮುಖ್ಯ ಗುರುಮಾತೆಯರಾದ ಸಿಸ್ಟರ್ ಐರಿನ್ ತಾವರೋ ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಾಸಿದ್ದರು.