ಜೀವ ಉಳಿಸಲು ರಕ್ತದಾನ ಮಾಡಿ : ಎಸಿ ಚಿದಾನಂದ ಗುರುಸ್ವಾಮಿ ಕರೆ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜೂ.22: ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಸಂಕಲ್ಪ ಮಾಡಿ, ನೀವು ನೀಡುವ ರಕ್ತ ಒಂದು ಜೀವ ಉಳಿಸಲು ವರದಾನಗುತ್ತದೆ ಎಂದು ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹೇಳಿದರು.
ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ  ಜೋಶಿಕೇರೆಯಲ್ಲಿರುವ  ಸ್ವಾಸ್ಥ್ಯ ಸ್ಪೆಷಾಲಿಟಿ ಹೆಲ್ತ್‍ಕೇರ್‍ನಲ್ಲಿ ತಾಲೂಕು ಜೆ.ಸಿ.ಐ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಉಚಿತ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತ ದೇಹದ ಜೀವನಾಡಿ ಎಂದರು.
ಜೆ.ಸಿ.ಐ ಅಧ್ಯಕ್ಷೆ ಡಾ ಪ್ರಿಯಾಂಕ ಅಧಿಕಾರ ಮಾತನಾಡಿ ರಕ್ತಕ್ಕೆ ವರ್ಷವಿಡಿ ನಿರಂತರವಾಗಿ ಬೇಡಿಕೆ ಇರುತ್ತದೆ. ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಗಳು ಸಂಭವಿಸುತ್ತಲೇ ಇರುತ್ತವೆ. ಜೊತೆಯಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ತ್ರೀಯರು, ಧ್ಯಾಲಸೀಮಿಯಾ, ಹಿಮೋಫಿಲಿಯಾ, ಸಿಕಲ್‍ಸೆಲ್ ಅನಿಮೀಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ ಹಾಗಾಗಿ ರಕ್ತದಾನ ಮಾಡಿ ರಕ್ತ ದಾನ ಮಾಡಲು ಭಯ, ಹಿಂಜರಿಕೆ ಬೇಡ ಎಂದರು.
ರವಿ ಅಧಿಕಾರ ಮಾತನಾಡಿ ಗಂಡು, ಹೆಣ್ಣು ಎಂಬ ಭೇದವಿಲ್ಲದೇ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಪುರುಷರು ಪ್ರತಿ 3 ತಿಂಗಳಿಗೊಮ್ಮೆ ಮತ್ತು ಮಹಿಳೆಯರಿಗೆ ಪ್ರತಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಎಂದು ತಿಳಿಸಿದರು.
ಈ ಸಂರ್ಭದಲ್ಲಿ ಸ್ವರೂಪ್  ಬಸರಾಜ್,  ಪರಶುರಾಮ ಚಲವಾದಿ, ಡಾ. ಪ್ರವೀಣ್ ಕುಮಾರ್, ಅಕ್ಷತಾ ನಾಗರಾಜ್ ಸೇರಿದಂತೆ ಇತರರು ಇದ್ದರು