‘ಜಿಎಸ್‍ವಿ ಸರಿಗಮಪ’ ಸ್ಪರ್ಧೆಯಲ್ಲಿ ಹಾಡಿ ಸಂಭ್ರಮಿಸಿದವಿದ್ಯಾರ್ಥಿಗಳು
ಬೀದರ್:ಜೂ.22:ನಗರದ ಮಾಮನಕೇರಿಯಲ್ಲಿರುವಜಿಲ್ಲೆಯ ಪ್ರತಿಷ್ಠಿತ ಶಾಲೆಯಾದಜ್ಞಾನಸುಧಾ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜ್ಞಾನಸುಧಾ ವಿದ್ಯಾಲಯ (ಜಿಎಸ್‍ವಿ) ಸರಿಗಮಪ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮ್ಮ ಸುಮಧುರಕಂಠದಲ್ಲಿಗಾಯನ ಮಾಡುವ ಮೂಲಕ ಪ್ರೇಕ್ಷಕರಿಗೆಸಂಗೀತದರಸದೌತಣ ಉಣಬಡಿಸಿದರು.
ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ’ಜ್ಞಾನಸುಧಾ ವಿದ್ಯಾಲಯ (ಜಿಎಸ್‍ವಿ) ಸರಿಗಮಪ’ ಸ್ಪರ್ಧೆಯಿಂದಾಗಿವಿದ್ಯಾಲಯದಜ್ಞಾನರಂಗ ಸಭಾಂಗಣದಲ್ಲಿ ಸಂಗೀತ ಹಬ್ಬದ ವಾತಾವರಣ ನಿರ್ಮಿತಗೊಂಡಿತು.ಸ್ಪರ್ಧಾರ್ಥಿಗಳು ಸುಶ್ರಾವ್ಯವಾಗಿ ಹಾಡುವ ಮೂಲಕ ಸಂಗೀತದ ಸುಧೆಯನ್ನು ಹರಿಸಿದರು.
ಎರಡು ವಿಭಾಗದಲ್ಲಿಜರುಗಿದ ಸ್ಪರ್ಧೆಯಲ್ಲಿ ಪಾಲ್ಗೊಂಡಒಟ್ಟು 18 ಸ್ಪರ್ಧಾಳುಗಳುಕನ್ನಡ ಹಾಗೂ ಹಿಂದಿ ಹಾಡುಗಳನ್ನುಅತ್ಯುತ್ತಮವಾಗಿಹಾಡುವ ಮೂಲಕ ಪ್ರೇಕ್ಷಕರ ಮನರಂಜಿಸಿದರು.
‘ಏ ರಾತೆ ಏ ಮೋಸಂ ನದೀ ಕಾ ಕಿನಾರ’, ‘ತುಮಸೆ ಮಿಲ್‍ನೆ ಕಿ ತಮನ್ನಾ ಹೈ’, ‘ಶಿಲೆಗಳಲ್ಲಿ ಸಂಗೀತವಾ ಹಾಡಿದೆ’, ‘ಮೇರ ದಿಲ್‍ಯೆ ಪುಕರೆಆಜಾ’, ‘ಸಿಲ್‍ಸಿಲಾ ಎ ಚಾಹತ್ ಕಾ’ ಹೀಗೆ ಸಂಗೀತದ ದಿಗ್ಗಜರಾದ ಲತಾ ಮಂಗೇಶ್ಕರ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಶ್ರೇಯಾಘೊಶಾಲ್, ಅರಿಜಿತ್ ಸಿಂಗ್ ಅವರ ಹಾಡುಗಳನ್ನು ಹಾಡಿದರು.
ಎರಡು ವಿಭಾಗದಲ್ಲಿ ನಡೆದಅಂತಿಮ ಸ್ಪರ್ಧೆಗೆಆಯ್ಕೆಯಾದ 18 ವಿದ್ಯಾರ್ಥಿಗಳಲ್ಲಿ5ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳ ಹಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ7ನೇ ತರಗತಿ ವಿದ್ಯಾರ್ಥಿನಿ ಯುಕ್ತಿಗೌತಮ್ ಅರಳಿ ಪ್ರಥಮ ಬಹುಮಾನ, ಶಿವಪ್ರಸಾದ ನಾಗಶೇಟ್ಟಿ ಬಿರಾದಾರ ದ್ವಿತೀಯ ಬಹುಮಾನ ಹಾಗೂಸಂಚಿತಾಕಿರಣ ಕೆ.ಪಿ.ತೃತೀಯ ಬಹುಮಾನ ಬಾಚಿಕೊಂಡರು. ಮಾಹೆರಕುಮಾರ ಮನೋಜ್ ಕೆ.ಹಾಗೂ ಸುಶ್ಮಿತಾ ಸುರೇಶ್‍ಅವರು ಸಮಧಾನಕರ ಬಹುಮಾನ ಪಡೆದರು.ಈ ವಿಭಾಗದಅಂತಿಮ ಸ್ಪರ್ಧೆಯಲ್ಲಿಆಯಶಲಿನ್ ಜಾಯ್ಸ್, ರಿದಾಅನಮ್,ಯಶ್ ಪಾಟೀಲ್‍ಅವರು ಭಾಗವಹಿಸಿದ್ದರು.
ಇನ್ನ8ನೇ ತರಗತಿಯಿಂದ 10ನೇ ತರಗತಿ ವರೆಗಿನ ಪ್ರೌಢ ಶಾಲೆ ವಿದ್ಯಾರ್ಥಿಗಳ ವಿಭಾಗದ ಸ್ಪರ್ಧೆಯಲ್ಲಿ9ನೇ ತರಗತಿ ವಿದ್ಯಾರ್ಥಿ ಹರ್ಷ ಸಂತೋಷ ಪ್ರಥಮ ಬಹುಮಾನ, 10ನೇ ತರಗತಿ ವಿದ್ಯಾರ್ಥಿರಿಯಾ ಸಂದೀಪ್‍ದ್ವಿತೀಯ ಬಹುಮಾನ ಹಾಗೂ 8ನೇ ತರಗತಿ ವಿದ್ಯಾರ್ಥಿ ಕೌಶಿಕ್ ಸಂಗಮೇಶ್ವರತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.10ನೇ ತರಗತಿ ಶೀತಲ್ ಶಿವಾಜಿ ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿಅಲ್ಲಮಪ್ರಭುಅವರುಸಮಧಾನಕರ ಬಹುಮಾನ ಪಡೆದರು.ಈ ವಿಭಾಗದ ಸ್ಪರ್ಧೆಯಲ್ಲಿ ಜಸಿಂತಾ, ಸಂಪ್ರತಿ, ಲಿಸಾ ಮೋಹನ್, ಅಮೋಘ, ಅಮೃತಾಂಶುಅವರು ಪಾಲ್ಗೊಂಡುಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿಎಲ್ಲರ ಚಪ್ಪಾಳೆಗೆ ಪಾತ್ರರಾದರು.
ಇದಕ್ಕೂ ಮುಂಚೆ ನಡೆದ ಸ್ಪರ್ಧೆಯಉದ್ಘಾಟನಾ ಸಮಾರಂಭದಲ್ಲಿಮಾತನಾಡಿದಜ್ಞಾನಸುಧಾ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದಡಾ.ಪೂರ್ಣಿಮಾ ಜಿ. ಅವರು “ಜ್ಞಾನಸುಧಾ ವಿದ್ಯಾಲಯ ಸ್ಥಾಪಿಸಿ ಈ ವರ್ಷಕ್ಕೆ20 ವರ್ಷಆಗಿದ್ದು, ಈ ಸವಿನೆನಪಿಗಾಗಿ ಈ ವರ್ಷದಿಂದಲೇ ವಿದ್ಯಾಲಯದಲ್ಲಿ ‘ಮ್ಯೂಸಿಕ್ ಕ್ಲಬ್’ ಆರಂಭಿಸಲಾಗುತ್ತಿದೆ.ಈ ಕ್ಲಬ್‍ನಿಂದ ವಿದ್ಯಾರ್ಥಿಗಳಲ್ಲಿ ಸಂಗೀತಾಸಕ್ತಿ ಬೆಳೆಸಲುತುಂಬಾ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
‘ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸಂಗೀತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಹಿಸುವ ಉದ್ದೇಶದಿಂದ ಪ್ರತಿ ವರ್ಷ ಸರಿಗಮಪ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ.ಸಂಗೀತನಮ್ಮಲ್ಲಿನ ಮಾನಸಿಕ ಒತ್ತಡವನ್ನುಕಡಿಮೆ ಮಾಡಿಏಕಾಗ್ರತೆ ವೃದ್ಧಿಸುವ ಒಂದುಅದ್ಭುತವಾದಕಲೆಯಾಗಿದೆ.ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆಯ ಸಂದೇಶಗಳು ಇರುವಉತ್ತಮವಾದ ಹಾಡುಗಳನ್ನು ಆಲಿಸುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು’ಎಂದು ಸಲಹೆ ಮಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರತಿಮಾಗೋವಿಂದರೆಡ್ಡಿಅವರು ಮಾತನಾಡಿ, ‘ಉತ್ತಮಜೀವನ ರೂಪಿಸಿಕೊಳ್ಳಲು ಬೇಕಾದ ಮಾನವೀಯ ಮೌಲ್ಯಗಳು ಸಂಗೀತಕಲೆಯಲ್ಲಿಇದೆ.ಈ ಕಲೆ ಬಹಳ ತಲತಲಾಂತರದಿಂದ ಬೆಳೆದು ಬಂದಿದೆ.ಹಾಡುಗಳನ್ನು ಕೇಳುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
‘ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕೆಇದೆ.ಹೀಗಾಗಿ ಈ ಕಲೆಗೆ ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು’ ಎಂದುರಾಜೇಶ್ವರಿಚೆನ್ನಬಸವಣ್ಣ ಹೇಳಿದರು.
ಡಾ. ಹಂಸಾ ಸಿ.ಎನ್. ಮಾತನಾಡಿದರು. ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಮೇಲ್ವಿಚಾರಕರಾದರಜನಿ ಮೈಲೂರಕರ್, ಸಾಯಿಗೀತಾ ಪಾಟೀಲ್, ವಸಿಮಾ ಅವರು ಉಪಸ್ಥಿತರಿದ್ದರು.
‘ಉತ್ತಮಆರೋಗ್ಯಕ್ಕಾಗಿಯೋಗಾಸನ ಮಾಡಿ’
ನಗರದ ಮಾಮನಕೇರಿಯಲ್ಲಿರುವಜ್ಞಾನಸುಧಾ ವಿದ್ಯಾಲಯದಲ್ಲಿ ಶುಕ್ರವಾರವಿಶ್ವಯೋಗ ದಿನ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದಜ್ಞಾನಸುಧಾ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದಡಾ.ಪೂರ್ಣಿಮಾ ಜಿ. ಅವರು, ‘ಉತ್ತಮಆರೋಗ್ಯಕ್ಕಾಗಿ ಪ್ರತಿನಿತ್ಯಯೋಗಾಸನ ಮಾಡುವ ಹವ್ಯಾಸವನ್ನು ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.ಯೋಗಾಸನ ಮಾಡುವುದರಿಂದಓದುವಾಗಏಕಾಗ್ರತೆ ವೃದ್ಧಿಯಾಗುತ್ತದೆ’ಎಂದು ತಿಳಿಸಿದರು.
ವಿದ್ಯಾಲಯದಯೋಗ ಶಿಕ್ಷಕರಾದ ಆದಿತ್ಯಗುರುಜಿಅವರು ವಿದ್ಯಾರ್ಥಿಗಳಿಗೆ ಯೋಗಾಸನ ಮಾಡಿಸಿದರು. ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಮೇಲ್ವಿಚಾರಕರಾದರಜನಿ ಇದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಯೋಗಾಸನ ಮಾಡಿ ಸಂಭ್ರಮಿಸಿದರು.