ಬೆಳಕಿನ ಬೇಸಾಯ ಕುರಿತು ಸಂವಾದ
ಕಲಬುರಗಿ:ಜೂ.22:ಬಾಬಾ ಫೌಂಡೇಶನ್ ಉಳುಮೆ ಪ್ರತಿಷ್ಠಾನ, ರಂಗಸಂಗಮ ಕಲಾವೇದಿಕೆ ಮತ್ತು ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ (ಕೆ.ಕೆ.ಸಿ.ಸಿ)., ಕಲಬುರಗಿ ಇವರ ಸಂಯುಕ್ತಶೃಯದಲ್ಲಿ ಬೆಳಕಿನ ಬೇಸಾಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಒಂದು ಎಕರೆಯಲ್ಲಿ 22ಸಾವಿರ ಕೆಜಿ ಆಹಾರ ಧ್ಯಾನಗಳನ್ನು ಬೆಳೆಸುವುದಲ್ಲದೇ ತಿಂಗಳಿಗೆ 15000 ಸಾವಿರ ರೂ. ಆದಾಯ ಹೇಗೆ ಗಳಿಸಬಹುದೆಂಬ ಮಾಹಿತಿಯನ್ನು ನೀಡಿ ಶ್ರೀ ಅವೀನಾ ಟಿ.ಜಿ.ಎಸ್ ಮಾತನಾಡುತ್ತಾ. ಬೆಳಕಿನ ಬೇಸಾಯದ ಮೊದಲ ಹಂತ, ಒಂದು ಎಕರೆ ಭೂಮಿಯಲ್ಲಿ ಟ್ರೆಂಚ್‍ಗಳನ್ನು ವೈಜ್ಞಾನಿಕವಾಗಿ ಆಳವಡಿಸಿಕೊಂಡು ಮಳೆಯ ನೀರನ್ನು ಇಂಗಿಸುವ ಪ್ರಯತ್ನ ಮಾಡಬೇಕು. ಅಂದರೆ ಬೀಳುವ ಮಳೆಯ ಅಷ್ಟು ನೀರು ಅದೇ ಜಮೀನಿನಲ್ಲಿ ಇಂಗುವಂತೆ ಮಾಡುವುದು. ಒಂದು ಎಕರೆ ಪ್ರದೇಶದಲ್ಲಿ ಒಂದು ವರ್ಷದಲ್ಲಿ ನಾಲ್ಕರಿಂದ ಐದು ಲಕ್ಷ ಲೀಟರು ನೀರು ಸಂಗ್ರಹವಾಗುತ್ತದೆ. ಅದಷ್ಟು ಅಲ್ಲೇ ಇಂಗಿ ಅಂತರ್ಜಲವಾಗಿ ಪರಿವರ್ತನೆಯಾದರೆ, ನೀರಿನ ಸಮಸ್ಯೆ ಕಾಡಲಾರದು. ಏಕೆಂದರೆ ಇಂದು ನೀರು ಇಂಗುವುದು ಕಡಿಮೆಯಾಗುತ್ತಿದ್ದು ಹರಿದುಹೋಗುವುದು ಹಾಗಾಗಿ 1500 ಅಡಿ ಆಳ ಕೊರೆದರೂ ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ. ಸಿಕ್ಕರೂ ಫ್ಲೋರೈಡ್ ಯುಕ್ತ ನೀರು. ಅದನ್ನು ಕುಡಿದರೆ ಜನ ಮತ್ತು ಜಾನುವಾರುಗಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದೆಲ್ಲವನ್ನು ಗಮನದಲಿಟ್ಟುಕೊಂಡು ಮೊದಲಿಗೆ ಟ್ರೆಂಚ್ ನಿರ್ಮಾಣ ಮತ್ತು ಮಳೆನೀರು ಸಂಗ್ರಹಣೆಗೆ ತೊಡಗಬೇಕು.
ಎರಡನೆಯ ಹಂತವಾಗಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಬೇಕು ಒಂದು ಎಕರೆಯಲ್ಲಿ 30 ಬಗೆಯ 1200 ಸಸಿಗಳನ್ನು ಕೂರಿಸಲಾಗುತ್ತದೆ. ಎತ್ತರಕ್ಕೆ ಬೆಳೆಯುವ ಕಾಡುಮರಗಳು, ಹೂವು, ಹಣ್ಣು, ಧಾನ್ಯ, ಸಿರಿಧಾನ್ಯ, ದ್ವಿದಳಧಾನ್ಯ, ತರಕಾರಿ ಸೇರಿದಂತೆ ಹಲವು ಬಗೆಯ ಕೃಷಿಸಂಕುಲದ ಸಂಯೋಜನೆಯನ್ನು ವಿಶೇಷವಾಗಿ ಮಾಡಬೇಕು. ಇದನ್ನು ಬೆಳಕಿನ ಬೇಸಾಯ ತತ್ವದ ಅಡಿಯಲ್ಲಿ ಸಂಯೋಜನೆ ಮಾಡಲಾಗುತ್ತದೆ. ಯಾವ ಕೃಷಿಬೆಳೆಗೆ ಎಷ್ಟು ಬೆಳಕುಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡು ಜೋಡಣೆ ಮಾಡಬೇಕು.
ಮಣ್ಣಿನ ಫಲವತ್ತತೆ ಅಂದರೆ ಹ್ಯೂಮಸ್ ಹೆಚ್ಚಿಸಿಕೊಳ್ಳುವುದು, ಸಾವಯವ ಇಂಗಾಲದ ಪ್ರಮಾಣದಲ್ಲಿ ವೃದ್ಧಿ, ಜೀವಾಣುಗಳ ಸಂಖ್ಯೆಯಲಿ ವೃದ್ಧಿ ಇವೆಲ್ಲವೂ 3-4 ವರ್ಷಗಳಲ್ಲಿ ಆಗುವಂತಹ ಪ್ರಕ್ರಿಯ 4-5 ವರ್ಷದ ಕೊನೆಗೆ ಇದೊಂದು ಪರಿಪೂರ್ಣಮಾಡಿ ಆಹಾರ ಬನ (ಫುಡ್ ಫಾರೆಎಸ್ಟ್) ಆಗಿ ರೂಪಾಂತರಣಗೊಳ್ಳುತ್ತದೆ. ಮತ್ತು ಕನಿಷ್ಠ 10-15 ಸಾವಿರ ವರಮಾನವನ್ನು ತಂದುಕೊಡುವಂತಾಗುತ್ತದೆ. ಮರಗಿಡಗಳಿಂದ ಕೂಡಿರುವ ವಾತಾವರಣದಲ್ಲಿ ಕೃಷಿ ಪದ್ಧತಿ ಅಳವಡಿಸಿಕೊಂಡರೆ, ವೈವಿಧ್ತೆ ಅಲ್ಲಿದ್ದರೆ ಉತ್ತಮ ಫಲಿತಾಂಶ ಬರುತ್ತದೆ. ಭತ್ತವನ್ನು ಕೂಡ ಮರಗಿಡಗಳ ಮಧ್ಯ ಬೆಳೆಯುವುದು ಸಾಧ್ಯವಿದೆ. ಬೆಳಕಿನ ಬೇಸಾಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅವಿನಾಶ ಟಿ.ಜಿ.ಎಸ್ ರವರ ಮೊಬೈಲ್ ನಂ. 8197856132
ಇದು ಪ್ರತಿ ಜಿಲ್ಲೆಯಲ್ಲೂ ಆಗಬೇಕು. ಮುಂದೆ ಪ್ರತಿ ತಾಲೂಕು ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟಕ್ಕೂ ಇದನ್ನು ವಿಸ್ತರಿಸುವ ಹಂಬಲ ವ್ಯಕ್ತಪಡಿಸಿದರು. ಆಹಾರ ಬನಗಳು ಹೆಚ್ಚಾದಂತೆ ಜಾಗತಿಕ ತಾಪಮಾನವನ್ನು ನಿಯಂತ್ರಿಸುವ, ಕೆಲಸ ಆಗುತ್ತದೆ ಎಂಬ ಆಶಯವನ್ನು ಕೃಷಿತಜ್ಞ ಅವಿನಾಶ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಬೆಳಕಿನ ಬೇಸಾಯ ಸಂವಾದ ಆಯೋಜಿಸಿದ ಡಾ. ರಾಜಶೇಖರ ಬಸನಾಯಕ ಇವರು ಮಾತನಾಡಿ ಜಾಗತಿಕ ತಾಪಮಾನವನ್ನು ನಿಯಂತ್ರಿಸುವ, ಮಣ್ಣಿನ ಫಲವತ್ತತೆ ಮತ್ತುತೇವಾಂಶ ವೃದ್ಧಿ ಮಾಡುವ ನಿಟ್ಟಿನಲ್ಲಿ ಇದೊಂದು ವಿಶೇಷವೇನಿಸುವ ಪ್ರಯತ್ನವೆಂದು ಅಭಿಪ್ರಾಯ ಪಟ್ಟರು ಈ ಸಂದರ್ಭದಲ್ಲಿ ಶ್ರೀಮತಿ ಸುಜಾತ ಜಗಮ ಶೆಟ್ಟಿ ಮತ್ತು ಶ್ರೀ ಜಗದೀಶ ಗಾಜರೇ ರೈತ ಮತ್ತು ಅತಿಥಿಗಣ್ಯರು ಉಪಸ್ಥತ ಇದರು ಇದರ ಲಾಭ ಪಡೆದುಕೊಡರು.