ಸಕಾಲದಲ್ಲಿ ಸಾಲ ಮರುಪಾವತಿಯಿಂದ ಸಂಸ್ಥೆ ಅಭಿವೃದ್ಧಿ
ದೇವನಹಳ್ಳಿ.ಸೆ.೨೬-ಸಕಾಲದಲ್ಲಿ ಬ್ಯಾಂಕ್‌ಗಳಿಗೆ ಗ್ರಾಹಕರು ಸಾಲ ಮರುಪಾವತಿ ಮಾಡಿದ್ರೆ ಬ್ಯಾಂಕ್ ಸಂಘಸಂಸ್ಥೆಗಳು ,ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ್ ತಿಳಿಸಿದ್ರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಗಿಡ್ಡಿ ಬಾಗಿಲಿನಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ನಿರ್ದೇಶಕರುಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸಬೇಕು, ಷೇರುಗಳನ್ನು ಮಾಡಿಸುವ, ಠೇವಣಿ, ದೇಣಿಗೆ ಸಂಗ್ರಹ,ಮಾಡುಸಬೇಕು, ಹಾಗೂ ಉಳಿತಾಯ ಖಾತೆ ಮುಂತಾದವುಗಳನ್ನು ಮಾಡಿಸಿ ಸಂಘ ಸಂಸ್ಥೆಗಳಲ್ಲಿ ವ್ಯವಹರಿಸುವಂತೆ ಮಾಡಬೇಕು, ಎಂದರು, ಅರ್ಹರು ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಬೇಕು, ಹಾಗೆ ಸರ್ವ ಸದಸ್ಯರುಗಳು ಕಾರ್ಯಕ್ರಮಗಳಿಗೆ ಹಾಜರಾಗಬೇಕು, ಸಂಘದ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ಬಾಗವಹಿಸಬೇಕು ಎಂದರು.
ಇದೇ ವೇಳೆಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ್, ನಿರ್ದೇಶಕರಾದ ಸಿ ಮುನಿರಾಜು, ಬಿ, ರಾಮು ರಾಧಾಕೃಷ್ಣ ,ಚಂದ್ರಪ್ಪ, ಚನ್ನಕೇಶವ, ಮುನಿಕೃಷ್ಣ,ಗೋಪಾಲಕೃಷ್ಣ, ಮುನಿರತ್ನಮ್ಮ ಹಾಗೂ ಮುಖಂಡ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ,ಹಾಗು ಶ್ರಿ ಶಕ್ತಿ ಸಂಘದ ಸದಸ್ಯರು,ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸದಸ್ಯರು ಹಾಗೂ ಇತರರು ಇದ್ದರು.