ಸೂಟ್‌ಕೇಸ್ ಪತ್ತೆ ಜನರ ಆತಂಕ
ಕೋಲಾರ, ಸೆ. ೨೬- ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸೂಟ್‌ಕೇಸ್‌ವೊಂದು ಪತ್ತೆಯಾಗಿದೆ. ನಗರ ಹೊರವಲಯದ ಟಮಕ ಬಳಿ ಸೂಟ್ ಕೇಸ್ ಕಂಡು ಬಂದಿದ್ದು, ಸೂಟ್‌ಕೇಸ್‌ನಿಂದ ಶಬ್ದ ಹೊರ ಬರುತ್ತಿರುವುದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ.
ಸ್ಥಳಕ್ಕೆ ಗಲ್ ಪೇಟೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಅಗ್ನಿ ಶಾಮಕ ಸಿಬ್ಬಂದಿ ಕೂಡ ಭೇಟಿ ನೀಡಿದ್ದಾರೆ. ಸೂಟ್‌ಕೇಸ್‌ನಿಂದ ಬರುತ್ತಿರುವ ಶಬ್ದದಿಂದ ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ಸೂಟ್‌ಕೇಸ್ ನೋಡಿದ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ SP ನಿಖಿಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸೂಟ್‌ಕೇಸ್‌ನ್ನು ಸ್ಕ್ಯಾನ್ ಮಾಡಿದಾಗ ಒಳಭಾಗದಲ್ಲಿ ಮೆಟಲ್ ಇರುವ ಮಾಹಿತಿ ಲಭ್ಯವಾಗಿದೆ. ಕ್ರೌನ್ ಕಂಪನಿಯ ಒಂದೂವರೆ ಲಕ್ಷ ಬೆಲೆ ಬಾಳೋ ಸೂಟ್ ಕೇಸ್ ಇದಾಗಿದ್ದು, ಎರಡು ಕೀಗಳಿದ್ದು ಫಿಂಗರ್ ಸ್ಕಾನರ್ ಮೂಲಕ ಮಾತ್ರ ಓಪನ್ ಆಗುತ್ತೆ. ಸ್ಕ್ಯಾನರ್ ಇರುವ ಕಾರಣ ಬೀಪ್ ಶಬ್ದ ಬರುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.