ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, ಬಾಬುರೆಡ್ಡಿ ತಂಡ ಗೆಲುವು
ಆನೇಕಲ್.ಸೆ.೨೬-ಕಾಚನಾಯಕನಹಳ್ಳಿ ಗ್ರಾಮದಲ್ಲಿರುವ ಹೆನ್ನಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿ ಆಡಳಿತ ಮಂಡಳಿಯ ನಿರ್ದೇಶಕರುಗಳ ಆಯ್ಕೆಗಾಗಿ ಚುನಾವಣೆ ನಡೆಯಿತು.
ಇನ್ನು ಹೆನ್ನಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು ೧೨ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅದರಲ್ಲಿ ಹೆಚ್.ಸಿ.ನಾಗರಾಜ್. ಹೆಚ್.ವಿ.ಬಾಬುರೆಡ್ಡಿ. ಟಿ.ತಿಪ್ಪೇಸ್ವಾಮಿರವರು ಮೂರು ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡರು ಉಳಿದ ೯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಪ್ ಕಾಮ್ಸ್ ಬಾಬುರೆಡ್ಡಿ, ಆರ್.ಕೆ.ರಮೇಶ್, ಸಿ.ಕೆಂಪೇಗೌಡ, ವಿ.ನಂದಕುಮಾರ್, ಜಿ.ಮರಿಸ್ವಾಮಿ, ಶ್ರೀರಾಮರೆಡ್ಡಿ, ನಂಜಪ್ಪ, ಎಸ್.ನಾಗರತ್ನ, ಬಿ.ಪ್ರೇಮ ರವರು ಗೆಲುವು ಸಾದಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಬಿ.ಕೆ. ವಿದ್ಯಾರಾಣಿ ಪತ್ರಿಕಾ ಪ್ರಕಟಣೆ ತಿಳಿಸಿದರು.
ಬಾಬುರೆಡ್ಡಿ ಮಾತನಾಡಿ ಕಳೆದ ೨೫ ವರ್ಷಗಳಿಂದ ಹೆನ್ನಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ರೈತರ ಸಾರ್ವಜನಿಕರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಈ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ನಮ್ಮ ತಂಡಕ್ಕೆ ಸಂಘದ ಎಲ್ಲಾ ಸದಸ್ಯರು ಬೆಂಬಲವನ್ನು ಸೂಚಿಸಿದ್ದು ಮುಂದಿನ ದಿನಗಳಲ್ಲಿಯೂ ಸಹ ಸಂಘದ ವತಿಯಿಂದ ಮತ್ತಷ್ಟು ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.