ಮಾದರಿ ರೈತರ ಸಂಘದ ನೂತನ ಕಟ್ಟಡ ನಿರ್ಮಾಣ
ಹೊಸಕೋಟೆ.ಸೆ.೨೬- ತಾಲ್ಲೂಕಿನ ನಂದಗುಡಿ ಹೋಬಳಿಯ ಶಿವನಾಪುರ ರೇಷ್ಮೆ ಬೆಳಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ೨೦೨೩- ೨೪ ನೇ ವರ್ಷದ ವಾರ್ಷಿಕ ಮಹಾ ಸಭೆಯನ್ನು ಅಮ್ಮಿಕೊಳ್ಳಲಾಗಿದ್ದು ಬ್ಯಾಂಕಿನ ನಿರ್ದೇಶಕರು ಹಾಗು ಮುಕಂಡರಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಸಂಗದ ಉಪಾಧ್ಯಕ್ಷರಾದ ಚಂದ್ರಪ್ಪರವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ನಾನು ೫ ವರ್ಷಗಳ ಕಾಲ ಈ ಸಂಗದಲ್ಲಿ ಕೆಲಸ ಮಾಡುತ್ತಿದ್ದು ಈ ಸಂಸ್ಥೆ ಕಳೆದ ೭೩ ವರ್ಷಗಳಿಂದೆ ಸ್ಥಾಪನೆಯಾಗಿ ಅನೇಕರು ಕೆಲಸ ಮಾಡಿ ಹೋಗಿದ್ದಾರೆ ಆದರೆ ನಮ್ಮ ಅವದಿಯಲ್ಲಿ ರೈತರಿಗೆ ೭ ಕೋಟಿ ಬೆಳೆ ಸಾಲ ಚಿನ್ನಾಬರಣ ಸಾಲ ನೀಡಿದ್ದು ತಾಲ್ಲೂಕಿನಲ್ಲೇ ಮಾದರಿಯಾವುವಂತೆ ಹೊಸ ಕಟ್ಟಡವನ್ನು ಒಂದು ಕೋಟಿ ೨೩ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಅತೀ ಶೀಘ್ರದಲ್ಲಿ ಉದ್ಗಾಟನೆ ಮಾಡುತ್ತೇವೆ ಎಂದರು.
ಇನ್ನು ಈ ಸಂಸ್ತೆಗೆ ಉದ್ಯಮಿಗಳಾದ ಕಲ್ಕೆರೆ ಮಹದೇವಪ್ಪನವರು ೧೦ ಲಕ್ಷ ಹಣವನ್ನು ನೀಡಿ ಬ್ಯಾಂಕಿನ ಅಭಿವೃದ್ದಿಗೆ ಬಹಳಷ್ಟು ಶ್ರಮ ವಹಿಸಿದ್ದಾರೆ ಆದ್ದರಿಂದ ಅವರನ್ನು ನಮ್ಮ ಸೊಸೈಟಿ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಬ್ಯಾಂಕಿ ವ್ಯವಸ್ಥಾಪಕರಾಸ ಎಸ್,ಪಿ ಪ್ರದೀಪ್ ರವರು ತಿಳಿಸಿದರು,
ಈ ಸಂದರ್ಬದಲ್ಲಿ ಹಿರಿಯ ಮುಕಂಡ ಕಲ್ಲಪ್ಪ, ಉದ್ಯಮಿಗಳಾದ ಕಲ್ಕೆರೆ ಮಹದೇವಪ್ಪ. ಬ್ಯಾಂಕಿ ವ್ಯವಸ್ಥಾಪಕರಾಸ ಎಸ್,ಪಿ ಪ್ರದೀಪ್ ನಿರ್ದೇಶಕರಾದ ವಿನೂತ, ರಮೇಶ್. ದೇವೇಗೌಡ, ಮನ್‌ದೀಪ್‌ಗೌಡ, ಸೇರಿದಂತೆ ಇತರೆ ಮುಖಂಡರಿದ್ದರು,