ಸಾಂಕ್ರಾಮಿಕ ರೋಗದ ಕುರಿತು ಅರಿವು, ಸ್ವಚ್ಛತಾ ಕಾರ್ಯ
ಸಂಜೆವಾಣಿ ವಾರ್ತೆ
ಹನೂರು ಸೆ 26 :- ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಓಡಿಪಿ ಸಂಸ್ಥೆ ವತಿಯಿಂದ ಸಾಂಕ್ರಮಿಕ ರೋಗದ ಕುರಿತು ಅರಿವು ಮತ್ತು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಓಡಿಪಿ ಸಂಸ್ಥೆಯ ವಲಯ ಸಂಯೋಜಕಿ ಲಿಲ್ಲಿ ಮೇರಿ ಅವರು ಮಾತನಾಡಿ ಒಡಿಪಿ ಸಂಸ್ಥೆಯು ಹಳ್ಳಿಗಳಲ್ಲಿ ಬಡಮಹಿಳೆಯರ ಸಶಕ್ತಾತೆ, ಸಣ್ಣ ರೈತರ ಅಭಿವೃದ್ಧಿ ನೈರ್ಮಲ್ಯ ಅರೋಗ್ಯ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಪರಿಸರ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ಅವರ ಸರ್ವತೋಮುಖ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದೆ.
ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ, ಬಿಡರಹಳ್ಳಿ, ಸುಳ್ವಾಡಿ, ಕಾರಟುಕೋವಿಲ್, ಸಂಧಾನಪಾಳ್ಯ, ಕಿರಾಪತಿ, ಹೂಗ್ಯಂ ಪಂಚಾತಿಯ, ಕೂಡಲೂರು, ಜಾಲ್ಲಿಪಾಳ್ಯ ಮುಂತಾದ ಕಡೆಗಳಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ. ಪ್ರಸ್ತುತ ಎಲ್ಲೆಡೆ ಡೆಂಗೂ ಜ್ವರದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸಮುದಾಯದಲ್ಲಿ ಮುಂಜಾಗೃತ ಕ್ರಮವಾಗಿ ಸಂಸ್ಥೆಯ ಸ್ವ-ಸಹಾಯ ಸದಸ್ಯರೊಂದಿಗೆ ಸೇರಿ ಡೆಂಗೂ ಜ್ವರದ ಮತ್ತು ಸ್ವಚ್ಛತಾ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಓಡಿಪಿ ಸಂಘದ ಸದಸ್ಯರೊಂದಿಗೆ ಚರಂಡಿಗಳ ಸ್ವಚ್ಛತೆ, ಕಳೆ ಕೀಳುವುದು, ಅಂಗನವಾಡಿ, ಸಮುದಾಯ ಭವನ, ಚರ್ಚ್ ಆವರಣ, ರಸ್ತೆಗಳಲ್ಲಿ ಸ್ವಚ್ಛತೆ ಮಾಡುವುದು ಸೇರಿದಂತೆ ಹಲವಾರು ಸ್ಥಳದಲ್ಲಿ ಸ್ವಚ್ಛತೆ ಮಾಡಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾರ್ಟಳ್ಳಿ ಪಂಚಾಯತಿಯ ಪ್ರವೀಣ್, ಶ್ರೀ ಮುರಳಿ, ಮತ್ತು ಆಯಾ ಕ್ಷೇತ್ರದ ಆಶಾ ಕಾರ್ಯಕರ್ತರು ಡೆಂಗೂ ಮತ್ತು ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ, ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು.
ಇದೆ ವೇಳೆ ಓಡಿಪಿ ಸಂಸ್ಥೆಯ ವಲಯ ಸಂಯೋಜಕರು ಶ್ರೀಮತಿ ಲಿಲ್ಲಿ ಮೇರಿ, ಕಾರ್ಯಕರ್ತೆರದ ಶ್ರೀಮತಿ ಲಿಲ್ಲಿ ಸೇಲ್ವಾ ಕುಮಾರಿ, ಶ್ರೀಮತಿ ಪಾಸ್ಕಮೇರಿ ಮತ್ತು ಸಿ.ಎಸ್ ಸಾಗರ್ ರವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಟಿಗೊಳಿಸಿದರು.