ಯೋಗ ದಿನ ಆಚರಣೆ
ಹುಬ್ಬಳ್ಳಿ,ಜೂ22: ನಗರದ ಹಳೇಹುಬ್ಬಳ್ಳಿಯ ಸಹದೇವ ನಗರದಲ್ಲಿನ ಜ್ಞಾನ ಗಂಗೆ ಕೆಜಿ ಸ್ಕೂಲ್’ನಲ್ಲಿಂದು 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯೋಗವು ಎಲ್ಲ ಸಮಸ್ಯೆಗಳಿಗೆ ಪರಿಹಾರ, ಮಾನಸಿಕ ಹಾಗೂ ಶಾರೀರಿಕ ಸಮತೋಲನ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಮ ಆದ್ದರಿಂದ ಯೋಗವನ್ನು ದೈನಂದಿನ ಚಟುವಟಿಕೆಯಾಗಿ ಮಾಡಿಕೊಳ್ಳುವುದು ರೂಢಿಸಿಕೊಳ್ಳಬೇಕೆಂದರು.