371ನೇ ಕಲಂ ಸಂವಿಧಾನ ವಿರೋಧಿ ಶಕ್ತಿಗಳ ರಾಜ್ಯ ಒಡೆಯುವ ಕುತಂತ್ರಕ್ಕೆ ಹೋರಾಟ ಸಮಿತಿಯ ಖಂಡನೆ
ಕಲಬುರಗಿ:ಜೂ.22:ಪ್ರಾದೇಶಿಕ ಅಸಮತೋಲನೆ ನಿವಾರಣೆ ಮಾಡಲು ನಮ್ಮ ನಿರಂತರ ಹೋರಾಟ ಮತ್ತು ಮಲ್ಲಿಕಾರ್ಜುನ ಖರ್ಗೆ ಧರ್ಮಸಿಂಗ್ ಸೇರಿದಂತೆ ಎಲ್ಲಾ ಪಕ್ಷಗಳ ರಾಜಕೀಯ ಇಚ್ಛಾಶಕ್ತಿಯಿಂದ ಜಾರಿಗೆ ಬಂದಿರುವ 371ನೇ ಜೇ ಕಲಂ ತಿದ್ದುಪಡಿಯ ವಿರುದ್ಧ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿರೋಧಿ ಶಕ್ತಿಗಳು ಈಗ ಇಪ್ಪತ್ನಾಲ್ಕು ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕದ ವಿರುದ್ಧ ವಿಷ ಬೀಜ ಬಿತ್ತುವ ಮೂಲಕ ನಮ್ಮ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ನಿರುದ್ಯೋಗಿಗಳಿಗೆ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಸಹಿಸದೆ ಕಲ್ಯಾಣ ಕರ್ನಾಟಕವನ್ನು ಅಖಂಡ ಕರ್ನಾಟಕದಿಂದ ಬೇರ್ಪಡಿಸಿ ಪ್ರತ್ಯೇಕ ರಾಜ್ಯ ರಚನೆಗೆ ಕುತಂತ್ರ ನಡೆಸುತ್ತಿರುವುದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
371ನೇ ಜೇ ಕಲಂ ತಿದ್ದುಪಡಿ ಅಡಿ ಸಂವಿಧಾನ ಬದ್ಧವಾಗಿ ನಮ್ಮ ಹಕ್ಕಿನ ಸವಲತ್ತುಗಳ ಪಡೆಯುತ್ತಿದ್ದರೆ ಇದಕ್ಕೆ ಸಹಿಸಿಕೊಳ್ಳದೆ ಕಲ್ಯಾಣ ಕರ್ನಾಟಕ ವಿರೋಧಿ ಪಟ್ಟಭದ್ರ ಶಕ್ತಿಗಳು ಇಪ್ಪತ್ನಾಲ್ಕು ಜಿಲ್ಲೆಗಳಲ್ಲಿ ತಪ್ಪು ಕಲ್ಪನೆ ಉಂಟು ಮಾಡುವ ಮೂಲಕ ಬೆಂಗಳೂರಿನಲ್ಲಿ ಹೋರಾಟ ಮಾಡಿದ್ದರು ಇದಕ್ಕೆ ಕಲ್ಯಾಣದಲ್ಲಿ ತಕ್ಕ ಪ್ರತಿ ವಿರೋಧದ ಹೋರಾಟಗಳು ನಡೆದ ಬೆನ್ನಲ್ಲೇ ಈಗ ನಮ್ಮ ಪ್ರದೇಶದ ವಿರುದ್ಧ ಕಲ್ಯಾಣ ಕರ್ನಾಟಕೇತರ ಸಂಘಗಳು ರಚನೆ ಮಾಡಿಕೊಂಡು ನಮ್ಮ ಪ್ರದೇಶದ ಮೀಸಲಾತಿ ವಿರುದ್ಧ ಷಡ್ಯಂತ್ರ ನಡೆಸುತ್ತಿರುವುದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಗಿ ಖಂಡಿಸುತ್ತದೆ.ಅಷ್ಟೆ ಅಲ್ಲದೆ ದಕ್ಷಿಣ ಕರ್ನಾಟಕ ಹೋರಾಟ ಸಮಿತಿ ರಚನೆ ಮಾಡಿಕೊಂಡು ಕಲ್ಯಾಣ ಕರ್ನಾಟಕದ ಸಂವಿಧಾನ ಬದ್ಧ ಹಕ್ಕುಗಳ ವಿರುದ್ಧ ಹೋರಾಟ ಮಾಡಲು ಕುತಂತ್ರದ ರೊಪರೇಷಗಳನ್ನು ಹಮ್ಮಿಕೊಳ್ಳಲು ಷಡ್ಯಂತ್ರ ಹಮ್ಮಿಕೊಳ್ಳಲು ಮುಂದಾಗಿರುವ ಕಲ್ಯಾಣ ವಿರೋಧಿ ಶಕ್ತಿಗಳ ಕೃತ್ಯಕ್ಕೆ ಸಮಿತಿ ಸಹಿಸುವುದಿಲ್ಲ ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶದ ಜನರು ತಮ್ಮ ಸಂವಿಧಾನ ಬದ್ಧ ಹಕ್ಕಿನ ರಕ್ಷಣೆಗೆ ಉಗ್ರ ಹೋರಾಟಗಳು ನಡೆಸುವುದಾಗಿ ಕಲ್ಯಾಣ ಕರ್ನಾಟಕದ ಜನಮಾನಸದ ವತಿಯಿಂದ ಸಮಿತಿ ಸಂವಿಧಾನ ವಿರೋಧಿ ಶಕ್ತಿಗಳಿಗೆ ಎಚ್ಚರಿಕೆ ನೀಡಿದೆ.
ಸಂವಿಧಾನ ವಿರೋಧಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ವಿರೋಧಿ ಮನೋಭಾವದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಲ್ಯಾಣ ಕರ್ನಾಟಕದ ಎಲ್ಲಾ ಕ್ಷೇತ್ರದ ಜನರು ಮತ್ತು ವಿಶೇಷವಾಗಿ ನಿರುದ್ಯೋಗಿಗಳು ವಿಧ್ಯಾರ್ಥಿಗಳು ಈ ವಿಷಯಕ್ಕೆ ಗಂಭೀರವಾಗಿ ಪರಿಗಣಿಸಿ ನಮ್ಮ ಅಸ್ತಿತ್ವಕ್ಕೆ ದಕ್ಕೆ ಬರದಂತೆ ಸಂಘಟಿತ ಹೋರಾಟಕ್ಕೆ ಸಿದ್ದರಿರಲು ಸಮಿತಿ ಕೆರೆ ನೀಡುತ್ತದೆ ಅದರಂತೆ ಕಲ್ಯಾಣ ಕರ್ನಾಟಕದ ಸಚಿವರು ಸಂಸದರು ಶಾಸಕರು ಹಾಗೂ ಎಲ್ಲಾ ಪಕ್ಷಗಳ ಮುಖಂಡರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಲು ಸಮಿತಿ ಮನವಿ ಮಾಡಿಕೊಡಿದೆ.