ಯೋಗ’ ದಿನಾಚರಣೆಗಷ್ಠೇ ಸೀಮಿತವಾಗದಿರಲಿ: ಕುಡ್ಡಳ್ಳಿ
ಕಾಳಗಿ:ಜೂ.22:ಮಾನವನ ಸರ್ವರೋಗಗಳಿಗೆ ಯೋಗ ಮನೆ ಮದ್ದಾಗಿದೆ. ಆದರೆ ಈ ಯೋಗಾಭ್ಯಾಸವು ಬರಿ ದಿನಾಚರಣೆಗಷ್ಠೇ ಸೀಮಿತವಾಗಬಾರದು ಎಂದು ಕಾಳಗಿ ತಾಲೂಕು ಕಸಾಪ ಅಧ್ಯಕ್ಷ ಹಾಗೂ ಪತಂಜಲಿ ಭಾರತ್ ಸ್ವಾಭಿಮಾನ ಸಮಿತಿಯ ತಾಲೂಕ ಪ್ರಭಾರಿಗಳೂ ಆಗಿರುವ ಸಂತೋಷ ಕುಡ್ಡಳ್ಳಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನೂರಾರು ರೋಗಗಳನ್ನು ದೂರವಿಟ್ಟು ಉತ್ತಮ ಆರೋಗ್ಯ, ಏಕಾಗ್ರತೆಯ ಮನಸ್ಸು, ಶಾಂತಿ ಮತ್ತು ಸಮಚಿತ್ತದ ಬದುಕನ್ನು ಸಾಗಿಸಬೇಕಾದರೆ ಯೋಗಾಭ್ಯಾಸವು ತುಂಬಾ ಅಗತ್ಯವಾಗಿದೆ. ದೈನಂದಿನ ಜೀವನದಲ್ಲಿ ಯೋಗಕ್ಕೆ ಸ್ವಲ್ಪ ಸಮಯ ನೀಡಿದರೆ, ರೋಗವನ್ನು ದೂರ ಮಾಡಿ ಬದುಕಿನ ಬಂಡಿಯನ್ನು ದೀರ್ಘಕಾಲದತ್ತ ಕೊಂಡೊಯ್ಯುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲರಾದ
ಡಾ. ಪಂಡಿತ ಸಿ. ಬಿಳಾಮಗೆ ಮಾತನಾಡಿ, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮನುಷ್ಯ ಸಮಯವಿಲ್ಲದೆ ಒತ್ತಡದ ಬದುಕಿನಲ್ಲಿ ಕಾಲ ಕಳೆಯುತ್ತಿದ್ದಾನೆ.
ಶಾಂತಿ-ಸಂಯಮ ಕಳೆದುಕೊಳ್ಳುತ್ತಿದ್ದಾನೆ.
ಇವೆಲ್ಲವೂಗಳ ಶಮನಕ್ಕಾಗಿ ಯೋಗ ದಾರಿದೀಪವಾಗಿದೆ.
ಜನತೆಯಲ್ಲಿ ಯೋಗದ ಅರಿವನ್ನು ಮೂಡಿಸುವಲ್ಲಿ ಪತಂಜಲಿ ಯೋಗ ಶಿಬಿರ ಹಾಗೂ ಕಸಾಪ ಮಾಡುತ್ತಿರುವ ಕೆಲಸ ತುಂಬಾ ಶ್ಲಾಘನೀಯ ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಜಯಲಕ್ಷ್ಮೀ ಹಾವಪ್ಪಗೋಳ,ಪೆÇ್ರ. ಚಿತ್ರಶೇಖರ ನಾಗೂರ
ಡಾ. ಗುರುಪ್ರಕಾಶ ಹೂಗಾರಡಾ.ಶ್ರೀನಿವಾಸ ನಾಯನೂರಡಾ. ಶಿವಶರಣಪ್ಪ ಮೋತಕಪಳ್ಳಿ, ಡಾ. ಶಿವಲೀಲಾ ಚಟ್ನಳ್ಳಿಪೆÇ್ರ, ಸುಜಾತಾ ಮಾಕಲ್ಪ್ರೊ,ಜ್ಯೋತಿ ಕುಲಕರ್ಣಿಪೆÇ್ರ. ರಾಜೇಂದ್ರಕುಲಕರ್ಣಿ,ಗೋಪಾಲ ಚಿನ್ನೂರ,
ರೇವಣಸಿದ್ಧಪ್ಪ ಗುಂಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.