ಅಂತರಾಷ್ಟ್ರೀಯ ಯೋಗ ದಿನಾಚರಣೆ
ನರೆಗಲ್ಲ,ಜೂ22: ಪಟ್ಟಣದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ವತಿಯಿಂದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಮೈದಾನದಲ್ಲಿ ಯೋಗ ಅಭ್ಯಾಸವನ್ನು ದೈಹಿಕ ಶಿಕ್ಷಣ ನಿರ್ದೆಶಕರಾದ ಶಿವಾನಂದ ಕುರಿ, ಎಸ್. ಕೆ. ಗಾಣಿಗೇರ, ಕೆ. ಸಿ. ಜೋಗಿ, ಇವರು ನೆರವೇರಿಸಿದರು.
ಆಡಳಿತಾಧಿಕಾರಿ ಎನ್. ಆರ್. ಗೌಡರ, ಪ್ರಾಚಾರ್ಯ ವಾಯ್. ಸಿ. ಪಾಟೀಲ್, ಮುಖ್ಯೋಪಾಧ್ಯಾಯರಾದ ಎಸ್. ಎನ್. ಹೂಲಗೇರಿ, ಎಂ. ಬಿ. ಸಜ್ಜನರ, ವಿದ್ಯಾಸಾಗರ, ಎ. ಟಿ. ಮಳ್ಳಳ್ಳಿ, ಎಲ್. ಎನ್. ನಾಯಕ, ಎಸ್. ಬಿ. ಬೂದಿಹಾಳ, ಎಮ್. ವಿ. ಬಿಂಗಿ, ಬಿ. ಡಿ. ಯರಗೊಪ್ಪ, ಎಮ್. ಎಸ್. ಅತ್ತಾರ, ಎಸ್. ಶಿವಮೂರ್ತಿ, ಆಯ್. ಎಮ್. ಆರಿ, ಶ್ರೀಮತಿ ಎ. ಎಮ್. ರಾಠೋಡ, ಶ್ರೀಮತಿ ಎಸ್. ಎಫ್. ಧರ್ಮಾಯತ, ಶ್ರೀಮತಿ ಆಯ್. ಜ್ಞಾನೇಶ್ವರಿ, ಶ್ರೀ ಭೀಮಪ್ಪ ಅಬ್ಬಿಗೇರಿ, ಶ್ರೀ ನಂದೀಶ ಅಚ್ಚಿ, ಶ್ರೀಮತಿ ನವ್ಯಾ ಭಿಕ್ಷಾವತಿಮಠ, ಶ್ರೀಮತಿ ಶಶಿಕಲಾ ನಿಡುಸೂಸಿ, ಶ್ರೀಮತಿ ನೇತ್ರಾವತಿ ಸಜ್ಜನರ, ಹಾಗೂ ಕಾಲೇಜಿನ ಉಪನ್ಯಾಸಕ ವೃಂದ, ಉಭಯ ಪ್ರೌಢಶಾಲೆಗಳ ಶಿಕ್ಷಕ ವೃಂದ, ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.