ಗೊಗ್ಗವ್ವೆ ಅಮೃತ ಸರೋವರದ ದಡದಲ್ಲಿಯೋಗ ದಿನಾಚರಣೆ
ಔರಾದ :ಜೂ.22: ತಾಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯತಿಯಲ್ಲಿ ಅಂತರಾಷ್ಟ್ರೀಯ ಯೋಗದ ನಿಮಿತ್ಯ ಗೊಗ್ಗವ್ವೆ ಅಮೃತ ಸರೋವರದ ದಡದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು, ಪಂಚಾಯತಿಯ ಸದಸ್ಯರು, ಮತ್ತು ಸಿಬ್ಬಂಧಿ ವರ್ಗದವರಿಂದ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಬೆಳಿಗ್ಗೆ ಗೂಗ್ಗವೆ ಕೆರೆ ದಡದಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಯೋಗಕ್ಕೆ ಸಂಬಂಧಿಸಿದ ವಿವಿಧ ಆಸನಗಳಾದ ಪ್ರಾಣಯಾಮ, ಸೂರ್ಯಾಸನ, ಪದ್ಮಾಸನ, ಹಾಗೂ ಯೋಗಕ್ಕೆ ಸಂಬಂಧಿಸಿದ ಇತರೆ ಆಸನಗಳನ್ನು ಮಾಡಿದರು .
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಇಒ ಬಿರೇಂದ್ರ ಸಿಂಗ್ ಠಾಕೂರ್, ನಿರ್ದೇಶಕರು (ಗ್ರಾ.ಉ) ಸುದೇಶ ಕೊಡ್ಡೆ, ತಾಂತ್ರಿಕ ಸಂಯೋಜಕ ಆನಂದ, ತಾಂತ್ರಿಕ ಸಹಾಯಕರು ಸುದರ್ಶನ್, ಐಇಸಿ ಸಂಯೋಜಕರು ಓಶೀನ್, ಪಿಡಿಓ ಅನೀತಾ ರಾಠೋಡ್, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ವಗ್ಗೆ, ಕಾರ್ಯದರ್ಶಿ ಚಂದ್ರಕಾಂತ, ಹಾಗೂ ಸದಸ್ಯರು, ಗ್ರಾಮ ಪಂಚಾಯತ ಸಿಬ್ಬಂದಿಗಳು , ಮತ್ತು ಸಾರ್ವಜನಿಕರು ಹಾಜರಿದ್ದರು,