ಹರಪನಹಳ್ಳಿಯಲ್ಲಿ ಪಂಚಗಣಾಧೀಶ ಗುರು ಕೆಂಪೇಶ್ವರರ ರಥೋತ್ಸವ.
ಸಂಜೆವಾಣಿವಾರ್ತೆ
ಹರಪನಹಳ್ಳಿ, ಜೂ.22:, ಐತಿಹಾಸಿಕ ಹಿನ್ನೆಲೆಯುಳ್ಳ ಪಂಚಗಣಾದೀಶರಲ್ಲಿ ಒಬ್ಬರಾಗಿ ಪಟ್ಟಣದಲ್ಲಿ ನೆಲಸಿರುವ ಪವಾಡ ಪುರುಷ ಗುರುಕೆಂಪೇಶ್ವರ ಸ್ವಾಮಿಯ ರಥೋತ್ಸವವು ಶುಕ್ರವಾರ ಸಂಜೆ ವೈಭವದಿಂದ ಜರುಗಿತು.
ಪಟ್ಟಣದ  ಮೇಗಳಪೇಟೆಯ ಕೆಂಪೇಶ್ವರ ಮಠದ ಬಳಿ ಪೂಜೆ ನೇರವೇರಿಸಿ ಸಮಾಳ, ನಂದಿಕೋಲು ವಾದ್ಯಗಳೊಂದಿಗೆ ರಥೋತ್ಸವದ ಬಳಿ ಬಂದು ರಥದ ಗಾಲಿಗೆ ಪೂಜೆ ನೇರವೇರಿಸಿ ನಂತರ ಧ್ವಜವನ್ನು ಹರಾಜು ಮಾಡಲಾಯಿತು. ಪೂಜೆಯ ಬಳಿಕ ಸಂಜೆ 6.30 ಕ್ಕೆ ಅಪಾರ ಭಕ್ತ ವೃಂದ ಅತ್ಯಂತ ಸಡಗರದಿಂದ ರಥವನ್ನು ಎಳೆಯುವ ಮೂಲಕ ಕೆಂಪೆಶ್ವರ ಸ್ವಾಮಿ ಗೆ ಭಕ್ತಿ ಸಮರ್ಪಿಸಿದರು.
ಕೆಂಪೇಶ್ವರರ ದೇವಸ್ಥಾನದಲ್ಲಿ ಮೂರ್ತಿಗೆ ಹೂವಿನ ಅಲಂಕಾರಗಳಿಂದ ವಿಶೇಷ ಪೂಜೆಯ ಮಾಡಲಾಗಿತ್ತು. ಗುರುಪಾದ ದೇವರ ಮಠದ ಶ್ರೀಗಳು ತೇರನ್ನು ಏರಿದ್ದರು. ಕಲ್ಮಟದ ಶ್ರೀಗಳು ನೇತೃತ್ವ ವಹಿಸಿದ್ದರು.
ರಾಸುಗಳ ಮೇರವಣಿಗೆ: ಪಟ್ಟಣದ ಸಂಡೂರುಗೇರಿ, ಕುರುಬಗೇರಿ, ಉಪ್ಪಾರಗೇರಿ ಸೇರಿದಂತೆ ವಿವಿಧ ವಾರ್ಡಗಳಲ್ಲಿನ ರೈತರು ತಮ್ಮ ಎತ್ತುಗಳಿಗೆ ಹೂವುಗಳಿಂದ ಅಲಂಕರಿಸಿ, ವಾದ್ಯಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ನಡೆಸಿದರು.
ರಥೋತ್ಸವ ಕಾರ್ಯಕ್ರಮದಲ್ಲಿ ಅರ್ಚಕ ಕೆ.ಎಂ.ಶಿವಯೋಗಿ, ಕೆಂಪೇಶ್ವರ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಂ.ರಾಜಶೇಖರ, ಕಾರ್ಯದರ್ಶಿ ಪಟೇಲ್ ಬೆಟ್ಟನಗೌಡ, ಖಜಾಂಚಿ ಹುಳ್ಳಿ ಕೊಟ್ರಪ್ಪ, ಪಿ.ಬಿ.ಗೌಡ, ಆರುಂಡಿ ನಾಗರಾಜ, ಸಿ.ಎಂ.ಕೊಟ್ರಯ್ಯ,ಎಚ್.ಎಂ.ಕೊಟ್ರಯ್ಯ, ಮುಖ್ಯ ಶಿಕ್ಷಕ ಎ. ಎಸ್ .ಎಂ.ಗುರುಪ್ರಸಾದ್ , ಶಿವರಾಜ ಸಾವಳಗಿ, ಪ್ರಕಾಶ ಸಾವಳಗಿ, ವಕೀಲ ಪಿ.ಬಸವರಾಜ, ಸಿನಿಮಾ ಚಂದ್ರಣ್ಣ, ಪಾಟೀಲ್ ಪ್ರವೀಣ ಎಲ್ .ಕೊಟ್ರೇಶ, ಕೊಟ್ಗಿ ಕರಿಬಸಪ್ಪ, ಎಚ್.ಎಂ.ಜಗದೀಶ, ಇತರರು ಹಾಜರಿದ್ದರು.
.