ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ.”ಕೆ.ಹೇಮೇಶ್ವರ
ಸಂಜೆವಾಣಿ ವಾರ್ತೆ
ಸಂಡೂರು, ಜೂ.22:-ತಾಲೂಕಿನ ಹೊಸದರೋಜಿ ಗ್ರಾಮದಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಮತ್ತು ಸರಕಾರಿ ಪ್ರೌಢಶಾಲೆ ಹೊಸದರೋಜಿ ಹಾಗೂ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ) ಮಾವಿನಹಳ್ಳಿ ಜೂನ್ 4ನೇ ತಾರೀಖು ದಿನದಿಂದ ಜೂನ್ 21ನೇ ತಾರೀಖುನವರಿಗೆ 18ದಿನಗಳು ಕಾಲ ಯೋಗ ತರಬೇತಿ ಮತ್ತು ಧ್ಯಾನದ ಬಗ್ಗೆ ಬಾಲಕ ಮತ್ತು ಬಾಲಕಿಯರಿಗೆ ಯೋಗಾಭ್ಯಾಸ ನೀಡಲಾಯಿತು.
ಪ್ರತಿಯೊಬ್ಬರೂ ದಿನ ನಿತ್ಯ ಯೋಗಾಭ್ಯಾಸದೊಳಗೆ ಒಳಗೊಳ್ಳಬೇಕು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಸದೃಢವಾಗಲು ಯೋಗ ಅತಿ ಮುಖ್ಯವಾಗಿದೆ.ನಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಕಾಣುತ್ತಾ ಹೋಗುತ್ತೇವೆ ಅದನ್ನು ತಡೆಗಟ್ಟಲು ನಾವು ಧ್ಯಾನದಲ್ಲಿ ಮಗ್ನರಾಗಬೇಕೆಂದು ಸರಕಾರಿ ಪ್ರೌಢಶಾಲೆ ಹೊಸದರೋಜಿ ಮುಖ್ಯೋಪಾಧ್ಯಾಯರಾದ ಉಲ್ಲೇಶಿಯವರು ಹೇಳಿದರು.
ಅಂತರಾಷ್ಟ್ರೀಯ ಯೋಗ ದಿನವು ಪ್ರಾರಂಭವಾದ ವರ್ಷದಿಂದ ಗಮನಾರ್ಹವಾಗಿ ಬೆಳೆದಿದೆ. ಜಾಗತಿಕವಾಗಿ, ಸರ್ಕಾರಗಳು, ಯೋಗ ಸಂಸ್ಥೆಗಳು ಮತ್ತು ವ್ಯಕ್ತಿಗಳು ದೊಡ್ಡ ಪ್ರಮಾಣದ ಯೋಗ ತರಗತಿಗಳು, ಕಾರ್ಯಾಗಾರಗಳು ಮತ್ತು ಸಾಂಸ್ಕೃತಿಕ ಕೂಟಗಳನ್ನು ಯೋಜಿಸುತ್ತಾರೆ. ಯೋಗದ ಅರಿವನ್ನು ಹರಡಲು ಮತ್ತು ಸಮತೋಲಿತ, ಆರೋಗ್ಯಕರ ಜೀವನವನ್ನು ನಡೆಸಲು ಅದರ ಎಲ್ಲಾ ಅನುಕೂಲಗಳನ್ನು ಹರಡಲು ದಿನವು ಪ್ರಬಲವಾದ ವೇದಿಕೆಯಾಗಿ ಅಭಿವೃದ್ಧಿಗೊಂಡಿದೆ. ಅಂತಾರಾಷ್ಟ್ರೀಯ ಯೋಗ ದಿನವು ಹಲವಾರು ವಿಧಗಳಲ್ಲಿ ಮಹತ್ವದ್ದಾಗಿದೆ. ಪ್ರಪಂಚದಾದ್ಯಂತ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗದ ಪ್ರಯೋಜನಗಳ ಬಗ್ಗೆ ಜ್ಞಾನವನ್ನು ಹರಡಲು ಇದು ಪರಿಣಾಮಕಾರಿ ಸಾಧನವಾಗಿದೆ. ಈ ಹಳೆಯ-ಹಳೆಯ ಅಭ್ಯಾಸವನ್ನು ತನಿಖೆ ಮಾಡಲು ಮತ್ತು ಅದರ ರೂಪಾಂತರದ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಲು ಇದು ಜೀವನದ ಎಲ್ಲಾ ಕ್ಷೇತ್ರಗಳ ವ್ಯಕ್ತಿಗಳನ್ನು ಆಹ್ವಾನಿಸುತ್ತದೆ. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು, ಸಾಮಾನ್ಯ ಯೋಗಕ್ಷೇಮವನ್ನು ಹೆಚ್ಚಿಸಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಯೋಗವನ್ನು ಹಲವಾರು ಅಧ್ಯಯನಗಳಲ್ಲಿ ಪ್ರದರ್ಶಿಸಲಾಗಿದೆ. ಈ ವರ್ಷದ
“ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ.” ಈ ವಿಷಯವು ಯೋಗಾಭ್ಯಾಸದ ಎರಡು ಪ್ರಯೋಜನಗಳನ್ನು ಒತ್ತಿಹೇಳುತ್ತದೆ: 1.ವೈಯಕ್ತಿಕ ಯೋಗಕ್ಷೇಮವನ್ನು ಹೆಚ್ಚಿಸುವುದು ಮತ್ತು 2.ಸಮಾಜವನ್ನು ಸುಧಾರಿಸುವುದು.ಎಂಬುದು 2024ರ ಯೋಗದ ಧ್ಯೇಯ ವಾಕ್ಯವಾಗಿದೆ ಎಂದು ಯೋಗ ತರಬೇತಿಗಾರರಾದ ಕುರುಬರ ಹೇಮೇಶ್ವರ ಪ್ರಸ್ತಾಪಿಸಿದರು.
ನೀವು ದಿನಲೂ ಓದು ಮುಂಚಿತವಾಗಿ ನಾವೆಲ್ಲರೂ ಧ್ಯಾನವನ್ನು ಕೈಗೊಂಡು ಹತ್ತರಿಂದ ಹದಿನೈದು ನಿಮಿಷದವರೆಗೆ ಧ್ಯಾನ ಮಾಡುವುದನ್ನು ಅಳವಡಿಸಿಕೊಳ್ಳಬೇಕು. ತದನಂತರ ನಮ್ಮ ಚಿತ್ತ ನಾವು ತೆಗೆದುಕೊಳ್ಳುವ ಉಸಿರಾಟದ ಮೇಲೆ ಗಮನ ಕೇಂದ್ರಿತವಾಗಬೇಕೆಂದು ಸರಕಾರಿ ಪ್ರೌಢಶಾಲೆ ಹೊಸದರೋಜಿ ಶಿಕ್ಷಕರಾದ ಶಿವಮೂರ್ತಿಯವರು ಹೇಳಿದರು
ಯೋಗ ಮತ್ತು ಧ್ಯಾನದಲ್ಲಿ ಭಾಗವಹಿಸಿದವರು ಸರಕಾರಿ ಪ್ರೌಢಶಾಲೆ ಹೊಸದರೋಜಿಯ ಶಿಕ್ಷಕಿಯರಾದ ಸುಧಾ,ಪ್ರೇಮ, ಶಮಿಮ,ಜ್ಯೋತಿ ಗುರಿಕಾರಿ,ಜ್ಯೋತಿ ಎಮ್, ಶಿರಿನ,ಶಿಕ್ಷಕರಾದ ರಾಜಶೇಖರ, ನಾಗೇಂದ್ರ, ರಾಜೇಶ ಜಿ,ಆಯುಷ್ಯ ಇಲಾಖೆ ಡಾಕ್ಟರ್ ಶ್ರೀ ಫಣಿಂಧರ್,ಯೋಗ ತರಬೇತಿಗಾರ ಮೋಹನ,ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ರತ್ನಮ್ಮ, ರಮಾದೇವಿ,ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರು ರಾಜೇಶ್ವರಿ, ಪಾರ್ವತಿ, ಅನಿತ,ಕಿರ್ತನ,ಗೌತಮಿ, ರಶ್ಮಿ, ಭವಾನಿ, ಚಂದನ,ಕಾವೇರಿ, ಸಹಾನ,ಸುಕನ್ಯಾ,ಮಮತ,ಅನುಷಾ,ರುದ್ರವೇಣಿ,ಲಕ್ಷ್ಮಿದೇವಿ,ಇನ್ನೂ ಮುಂತಾದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.