ವಿಶ್ವ ಯೋಗ ದಿನಾಚರಣೆ
ಬ್ಯಾಡಗಿ,ಜೂ22: ದೇಶದ ಅನೇಕ ಋಷಿ ಮುನಿಗಳು, ಸಾಧಕರಿಂಧ ಸಿದ್ಧಿಸಿದ ಯೋಗಭ್ಯಾಸವು ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಕೊಡುಗೆ ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರಕಾಶ ಹುಣಸಿಕಟ್ಟಿ ಹೇಳಿದರು.
ತಾಲೂಕಿನ ಗುಂಡೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕದಮನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಬರುವ ಅಮೃತ ಸರೋವರ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಿದ ಊರ ಕೆರೆಯ ದಡದಲ್ಲಿ 10ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿಶ್ವ ಸಂಸ್ಥೆ ಸೇರಿ ವಿಶ್ವದ ಅನೇಕ ದೇಶಗಳು ಇಂದು ಯೋಗ ದಿನ ಆಚರಿಸುತ್ತಿವೆ. ಇತ್ತೀಚಿಗಿನ ದಿನಗಳಲ್ಲಿ ಬದಲಾದ ಆಹಾರ ಶೈಲಿ, ಜೀವನ ಕ್ರಮದಿಂದ ಇಂದು ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅದ್ದರಿಂದ ಮುಂಜಾಗ್ರತೆ ವಹಿಸುವುದು ತುಂಬಾ ಅವಶ್ಯವಾಗಿದೆ. ದುಶ್ಚಟಗಳನ್ನು ತ್ಯಜಿಸಿ, ಉತ್ತಮ ಆಹಾರ, ಗಾಳಿ ಸೇವಿಸುದರ ಮೂಲಕ ಆರೋಗ್ಯ ಕ್ಷಮತೆ ಸಾಧಿಸಬಹುದು. ಗ್ರಾಮೀಣರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಗ ದಿನಾಚರಣೆ ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ಸದಸ್ಯೆ ಭಾಗ್ಯ ತಳವಾರ, ಶಾಲಾ ಶಿಕ್ಷಕರಾದ ಪ್ರಶಾಂತ್ ಹಿತ್ತಲಮನಿ, ಎಂ.ಎನ್.ನರ್ತಿ, ತಾಲೂಕಾ ಐಇಸಿ ಸಂಯೋಜಕ ಅಕ್ಷಯ ದೇಶಪಾಂಡೆ, ಬಿಎಫ್’ಟಿ ಕರೇಗೌಡ, ಗ್ರಾಮ ಪಂಚಾಯತಿ ಸಿಬ್ಬಂದಿ, ಶಾಲಾ ಮಕ್ಕಳು ಮತ್ತು ಕೂಲಿಕಾರರು ಹಾಜರಿದ್ದರು.