ರಸ್ತೆ ಗುಂಡಿ ಮುಚ್ಚಿಸಿದ  ಪೊಲೀಸ್
(ಸಂಜೆವಾಣಿ ವಾರ್ತೆ)
ಬಳ್ಳಾರಿ ಜೂ.22: ಜಿಲ್ಲೆಯ ಸಿರುಗುಪ್ಪ ನಗರದ  ಬಳ್ಳಾರಿ ಹ ರಸ್ತೆ ಹದಗೆಟ್ಟಿದ್ದು ಆಳವಾದ ಗುಂಡಿಗಳಿದ್ದು ಸವಾರರಿಗೆ ಮತ್ತು ಪಾದಚಾರಿಗಳಿಗೂ ಅನೇಕ ತೊಂದರೆಗಳು ಆಗುತ್ತಿತ್ತು. ಅಲ್ಲದೆ ಅಪಘಾತಗಳಿಗೆ ಮುನ್ಸೂಚನೆ  ನೀಡುತ್ತಿದ್ದ ಈ ರಸ್ತೆ ತಗ್ಗು ಗುಂಡಿಗಳನ್ನು ಪೊಲೀಸರು  ಮುಚ್ಚಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾರ್ಯವು ನೆನೆಗುದಿಗೆ ಬಿದ್ದಿದ್ದು ಕಾಮಗಾರಿ ಕುಂಟುತ್ತಾ ಸಾಗಿದೆ ಗುತ್ತಿಗೆದಾರರಿಗೆ ಶಾಸಕರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿಗಳು ಹೇಳಿದರು ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಮಳೆಗಾಲವಾಗಿದ್ದು ರಸ್ತೆ ಗುಂಡಿಗಳು ಹೆಚ್ಚಿಗೆ ಆಗುತ್ತಿದ್ದು ಇದರಿಂದ ಅನೇಕ ತೊಂದರೆಗಳು ಆಗುತ್ತಿದೆ.
ಪಿಎಸ್ಐ ತಿಮ್ಮಣ್ಣ  ಜೆಸಿಬಿಯಿಂದ  ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದಾರೆ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.