ಸೋಮಶೇಖರ ರೆಡ್ಡಿಗೆ ಜನ್ಮದಿನದ ಶುಭಕೋರಿಕೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.22: ನಗರದ ಮಾಜಿ ಶಾಸಕ  ಜಿ.ಸೋಮಶೇಖರ ರೆಡ್ಡಿ ಅವರ 59 ನೇ ಜನ್ಮ ದಿನದ ಅಂಗವಾಗಿ ಅವರ ನಿವಾಸಕ್ಕೆ ತೆರಳಿದ ಜನತಾ ಬಜಾರ್ ಅಧ್ಯಕ್ಷ ಜಿ.ನೀಲಕಂಠಪ್ಪ, ನಿರ್ದೇಶಕ ಕೆ.ಭರ್ಮರೆಡ್ಡಿ,ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಶುಭಾಶಯ ಕೋರಿದರು.