೧೦೮ ಸೂರ್ಯ ನಮಸ್ಕಾರ್ ಗಿನ್ನೀಸ್ ದಾಖಲೆ
ಕೆ.ಆರ್.ಪುರ, ಜೂ.೨೨- ವಿಶ್ವಯೋಗ ದಿನ ಹಾಗೂ ಪರಿಸರ ದಿನದ ಅಂಗವಾಗಿ ಕೆಆರ್ ಪುರದ ಲಕ್ಷ್ಮೀ ಸೂಪರ್ ಸ್ಪೇಷಲಿಟಿ ಆಸ್ಪತ್ರೆ ವತಿಯಿಂದ ೩೯ ನಿಮಿಷಗಳಲ್ಲಿ ೧೦೮ ಸೂರ್ಯ ನಮಸ್ಕಾರ ಮಾಡುವ ಮೂಲಕ ಗಿನ್ನಿಸ್ ಬುಕ್ ಆಫ್ ರೇಕಾಡ್೯ ಸ್ಥಾನ ಪಡೆದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಕೆಆರ್ ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಕಾಲೇಜು ವಿಧ್ಯಾರ್ಥಿಗಳು ಸೇರಿದಂತೆ ನೂರಕ್ಕೂ ಸಾರ್ವಜನಿಕರೂ ಭಾಗವಹಿಸಿ ೧೦೮ ಸೂರ್ಯ ನಮಸ್ಕಾರ ಮಾಡುವ ಮೂಲಕ ಇತಿಹಾಸ ಪುಟ ಸೇರಿದ್ದಾರೆ.
ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆದುಕೊಳ್ಳುವ ಜೋತೆಗೆ ಸದೃಢ ಮಾನಸಿಕ ಪಡೆಯಬಹುದೆಂದು ನುಡಿದರು.
ಯೋಗ ಕೇವಲ ವ್ಯಾಯಾಮವಲ್ಲ, ಮನಸ್ಸು, ದೇಹ ಮತ್ತು ಆತ್ಮವನ್ನು ಸಂಯೋಜಿಸುತ್ತದೆ. ದೇಹದ ಸಾಮರಸ್ಯ, ಆಲೋಚನೆ, ದೇಹದಲ್ಲಿ ನಡೆಯುವ ಕ್ರಿಯೆಗಳ ನಡುವಿನ ಸಮತೋಲನ, ಸಂಯಮ ಹಾಗೂ ಏಕಾಗ್ರತೆಯನ್ನು ಪ್ರೇರಿಪಿಸುತ್ತದೆ ಎಂದರು.
ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಏಲ್ಲರಿಗೂ ಸಸಿಗಳನ್ನು ವಿತರಿಸುವ ಮೂಲಕ ಪರಿಸರದ ಮೇಲೆ ಕಾಳಜಿ ವಹಿಸುವಂತೆ ಮಾಡಿದರು.
ಈ ಸಂದರ್ಭದಲ್ಲಿ ಲಕ್ಷ್ಮೀ ಸೂಪರ್ ಸ್ಪೇಷಲಿಟಿ ಆಸ್ಪತ್ರೆಯ ಛೇರ್ ಮನ್ ಡಾ. ಸಂಬಾಶಿವಯ್ಯ,ಸಿಇಓ ರಾಘವೇಂದ್ರ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.