ದೇಹಧಾರ್ಡ್ಯ ಸ್ಪರ್ಧೆ ಮಹದೇವಪುರ ಚಾಂಪಿಯನ್
ಕೆ.ಆರ್.ಪುರ, ಜೂ.೨೨-ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ರಾಕ್ಸ್ ಜಿ.ಎಂ ಮೂರ್ತಿ ಕ್ಲಾಸಿಕ್ ಫಿಸಿಕಲ್ ವಿಭಾಗದಲ್ಲಿ ಮತ್ತು ಮಿಸ್ಟರ್ ಮಹದೇವಪುರ ಚಾಂಪಿಯನ್ನಾಗಿ ಹೊರಹೊಮ್ಮಿದರೆ.
ಇಂಡಿಯನ್ ಫಿಟ್ನೆಸ್ ಅಂಡ್ ಬಾಡಿ ಬಿಲ್ಡರ್ ಫೆಡರೇಶನ್ ಹಾಗೂ ಉತ್ತಮ ಕರ್ನಾಟಕ ದೇಹಧಾರ್ಡ್ಯ ಮತ್ತು ಫಿಟ್ನೆಸ್ ಸಂಸ್ಥೆ ವತಿಯಿಂದ ವೈಟ್ ಫೀಲ್ಡ್ ಇನ್ನರ್ ಸರ್ಕಲ್ ನಲ್ಲಿ
ರಾಷ್ಟ್ರೀಯ ಮಟ್ಟದ ಮತ್ತು ಮಿಸ್ಟರ್ ಮಹದೇವಪುರ ದೇಹಧಾರ್ಡ್ಯ ಸ್ಪರ್ಧೆಯನ್ನು ಆಯೋಜಿಸಿತ್ತು .
ಮೆನ್ಸ್ ಫಿಸಿಕಲ್ ವಿಭಾಗದಲ್ಲಿ ತಮಿಳುನಾಡಿನ ಶ್ರೀರಾಮ್ ಮತ್ತು ಬಾಡಿ ಬಿಲ್ಡರ್ ವಿಭಾಗದಲ್ಲಿ ತಮಿಳುನಾಡಿನ ರಾಮ್ ಕುಮಾರ್ ಚಾಂಪಿಯನ್ ರಾಗಿದ್ದಾರೆ.
ಸ್ಪರ್ಧೆಯಲ್ಲಿ ಆಂದ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಪಂಜಾಬ್, ಬಿಹಾರ ಸೇರಿದಂತೆ ೧೧ ರಾಜ್ಯಗಳ ೩೦೦ ಕ್ಕೂ ಹೆಚ್ಚು ದೇಹದಾಢ್ಯ ಪಟುಗಳು ಭಾಗವಹಿಸಿದ್ದರು.
ಮಿಸ್ಟರ್ ಮಹದೇವಪುರ ಚಾಂಪಿಯನ್ ಗರಿಮೆಗೆ ಪಾತ್ರರಾದ ಮೂರ್ತಿ ಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಬಹುಮಾನ ವಿತರಿಸಿದರು.
ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದವರು ಸೆಪ್ಟೆಂಬರ್‌ನಲ್ಲಿ ಬೆಂಗಳೂರು ನಗರದಲ್ಲಿ ನಡೆಯುವ ಅಂತರ ರಾಷ್ಟ್ರೀಯ ಏಶಿಯನ್ ಚಾಂಪಿಯನ್ ದೇಹದಾಡ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಎಂದುಉತ್ತಮ ಕರ್ನಾಟಕ ದೇಹದಾಢ್ಯ ಮತ್ತು ಫಿಟ್ನೆಸ್ ಸಂಸ್ಥೆ ಅಧ್ಯಕ್ಷ ಹಾಗೂ ಆಯೋಜಕ ಶ್ರೀನಿವಾಸ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಕರಿಬಸಪ್ಪ, ಕಾಮೇಶ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಮನೋಹರ ರೆಡ್ಡಿ, ಎಲ್, ರಾಜೇಶ್ ,ಚನ್ನಸಂದ್ರ ಚಂದ್ರಶೇಖರ್, ಮತ್ತಿತರರು ಹಾಜರಿದ್ದರು.