ನೂತನ ಕಾನೂನುಗಳು ಬದಲಾವಣೆ, ಸುರಕ್ಷಾ ಸಮಾಜ ನಿರ್ಮಾಕ್ಕೆ ಸಹಾಯಕ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೨; ದೇಶದಲ್ಲಿ ಜಾರಿಯಾಗಿರುವ 3 ನೂತನ ಕಾನೂನುಗಳು ಸಮಾಜದಲ್ಲಿ ಬದಲಾವಣೆ ತಂದು ಸುರಕ್ಷತೆಯ ಸಮಾಜ ನಿರ್ಮಾಣ ಮಾಡುವಲ್ಲಿ ಸಹಾಯಕ ಆಗಲಿವೆ ಎಂದು ಭಾರತದ ಲೋಕಪಾಲ ನ್ಯಾಯಾಂಗ ಸದಸ್ಯರೂ, ಹಿಮಾಚಲ ಪ್ರದೇಶದ ಉಚ್ಛ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು.ಜಿಲ್ಲಾ ವಕೀಲರ ಸಂಘ, ದಾವಣಗೆರೆ ವತಿಯಿಂದ ನಗರದ ವಕೀಲರ ಸಾಂಸ್ಕöÈತಿಕ ಸಮುದಾಯ ಭವನದಲ್ಲಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷ ಸಂಹಿತೆ, ಭಾರತೀಯ ಸಾಕ್ಷಿ ಅಧಿನಿಯಮ-2023 ಕುರಿತು ಆಯೋಜಿಸಲಾಗಿದ್ದ ಉಪನ್ಯಾಸ ಮಾಲಿಕೆ-9ನ್ನು ಉದ್ಘಾಟಿಸಿ, ಜಿಲ್ಲಾ ವಕೀಲರ ಸಂಘ ಹೊರತಂದಿರುವ ನೂತನ ಕಾಯಿದೆಗಳ ಕೈಪಿಡಿಯನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದರು.ನಮ್ಮ ದೇಶದ ಸಂಸತ್ತಿನ ಮೂಲಕ ನಮ್ಮ ದೇಶದಲ್ಲಿ ನೂತನ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಹಾಗಾಗಿ ಇವುಗಳ ಜಾರಿ ಹಾಗೂ ಪಾಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ವಿದೇಶಗಳಲ್ಲಿ ಗಮನಿಸಿದರೆ ಅಲ್ಲಿನ ಶಿಕ್ಷೆಯ ಪ್ರಮಾಣ ಶೇ.90ರಷ್ಟು ಇದೆ. ನಮ್ಮಲ್ಲಿ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ. ಕಾರಣ ಹಳೇ ಬೇರು ಹೊಸ ಚಿಗುರು ಸೇರಿಕೊಂಡು ಸ್ವಾಸ್ಥö್ಯ ಸಮಾಜ ನಿರ್ಮಾಣ ಮಾಡಲಿ ಎಂದು ಹಾರೈಸಿದರು. ದೇಶದಲ್ಲಿ ಈಗಾಗಲೇ ಹಲವಾರು ಕ್ರಿಮಿನಲ್ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಇದನ್ನು ಯಾರು ಮಾಡಿದ್ದಾರೆ ಎನ್ನುವ ಬಗ್ಗೆ ಚಿಂತನೆ ನಡೆಸುವ ಬದಲು ಅವುಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಧೀಶರು, ನ್ಯಾಯವಾದಿಗಳು ಮುಂದಾಗಬೇಕಿದೆ ಎಂದು ಕರೆ ನೀಡಿದರು.