ದೃಶ್ಯ ಕಲಾ ಕಾಲೇಜಿನಿಂದ ಡಾ.ಪ್ರಭಾ ಮಲ್ಲಿಕಾರ್ಜುನಗೆ ಅಭಿನಂದನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೧; ದೃಶ್ಯ ಕಲಾ ಮಹಾವಿದ್ಯಾಲಯದ ವತಿಯಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ನೂತನ ಸಂಸತ್ ಸದಸ್ಯರಾದ  ಡಾ.ಪ್ರಭಾ ಮಲ್ಲಿಕಾರ್ಜುನ ರವರನ್ನು ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ,ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ,ಬೋಧನಾ ಸಹಾಯಕರುಗಳಾದ ಡಾ.ಸಂತೋಷ ಕುಮಾರ್ ಕುಲಕರ್ಣಿ, ಡಾ.ಎಂ.ಕೆ.ಗಿರೀಶ್ ಕುಮಾರ್, ಸುರೇಶ್ ಡಿ.ಎಚ್, ದತ್ತಾತ್ರೇಯ ಭಟ್ಟ, ಪ್ರಮೋದ ಆಚಾರ್, ಹರೀಶ್ ಹೆಡ್ನವರ್,ಶಿವಶಂಕರ್ ಸುತಾರ, ನವೀನ್ ಆಚಾರ್, ಅರುಣ್ ಕಮ್ಮಾರ, ರಂಗನಾಥ ಕುಲಕರ್ಣಿ ಮೊದಲಾದವರು ಅವರ ಕಛೇರಿಯಲ್ಲಿ  ಭೇಟಿಯಾಗಿ  ವರ್ಣಕಲಾಕೃತಿ,ಹೂ ಗುಚ್ಛ ನೀಡಿ ಅಭಿನಂದಿಸಿದರು.