ಬಿ.ಪಿ.ಎಸ್.ಸಿ.ಯಲ್ಲಿ ಯೋಗ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.22: ನಗರದ ಡಾ|| ರಾಜುಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ  10 ನೇ ಅಂತರಾಷ್ಟ್ರೀಯ ಯೋಗಾ ದಿನಾಚರಣೆಯ ಕಾರ್ಯಕ್ರಮವು ಅತ್ಯಂತ  ಸಂಭ್ರಮದಿಂದ ನಡೆಯಿತು.  ನಮ್ಮ ಶಾಲೆಯ 10 ನೇ ತರಗತಿ ಕುಮಾರಿ ರಶ್ಮಿ ಸ್ವಾಗತ ಭಾಷಣ ಮಾಡಿದರು.
ಈ ಕಾರ್ಯಕ್ರಮವನ್ನು 10 ನೇ ತರಗತಿ ವಿಧ್ಯಾರ್ಥಿನಿಯಾದ ಕುಮಾರಿ ವೆನ್ನಲಾ ತಂಡದವರು ಯೋಗಾ ಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭಿಸಿದರು. ಕನ್ನಡ ಶಿಕ್ಷಕಿಯಾದ ಶ್ರೀಮತಿ ಶಿಲ್ಪಾರವರು ವ್ಯಾಯಾಮದ ಪ್ರಕಾರಗಳನ್ನು, ಆಸನಗಳ ಮಹತ್ವವನ್ನು ತಮ್ಮ ಭಾಷಣದ ಮೂಲಕ ತಿಳಿಸುತ್ತಾ, ನಮ್ಮ ಪೂರ್ವಿಕರು ಪ್ರಾಚೀನ ದೈನಂದಿನ ಜೀವನ ಶೈಲಿಗೆ ಯೋಗವನ್ನು ಅಳವಡಿಸಿಕೊಂಡ ಪದ್ಧತಿಗಳಾದ, ಬೀಸುವ ಕಲ್ಲನ್ನು ಉಪಯೋಗಿಸುವುದು, ಮಜ್ಜಿಗೆ ಕಡಿಯುವುದು, ಮುಂತಾದ ಚಟುವಟಿಕೆಯ ಹಿಂದೆ ಆರೋಗ್ಯವನ್ನು ಉತ್ತಮಗೊಳಿಸಲು ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡಿದ್ದನ್ನು ದೃಕ್ ಶ್ರವಣ ಮಾಧ್ಯಮದ ಮೂಲಕ ವಿಧ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ನಂತರ 5,6,7 ನೇ ತರಗತಿ ವಿಧ್ಯಾರ್ಥಿಗಳು ಹಾಗೂ ನಮ್ಮ ಶಾಲೆಯ ಹಿರಿಯ ಯೋಗಾ ಶಿಕ್ಷಕರಾದ ರಾಮಕೃಷ್ಣರವರು ವೃಕ್ಷಾಸನ, ಭದ್ರಾಸನ, ವಜ್ರಾಸನ, ಶಶಕಾಸನ ಮುಂತಾದ ಆಸನ ಮತ್ತು ಪ್ರಾಣಾಯಾಮಗಳನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮಕ್ಕೆ ಶಾಲೆಯ ಅಧ್ಯಕ್ಷರಾದ ಡಾ||ಎಸ್.ಜೆ.ವಿ. ಮಹಿಪಾಲ್ ರವರು ಉಪಸ್ಥಿತರಿದ್ದು, ಎಲ್ಲಾ ವಿಧ್ಯಾರ್ಥಿಗಳಿಗೆ  ಯೋಗದ ಮಹತ್ವವನ್ನು ಹಾಗೂ ಮಕ್ಕಳು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸುತ್ತಾ ಎಲ್ಲಾ ಆಸನಗಳನ್ನು ತೋರ್ಪಡಿಸಿದ ವಿಧ್ಯಾರ್ಥಿಗಳನ್ನು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಜೆ. ಅನೀಲ್ ಕುಮಾರ್ ರವರು, ಶಿಕ್ಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು 10 ನೇ ತರಗತಿ ವಿಧ್ಯಾಥಿನಿಯಾದ ಕುಮಾರಿ ರಶ್ಮಿಯವರು ನೆಡಿಸಿಕೊಟ್ಟರು.