ಯೋಗ ಬಾಹ್ಯ ಪ್ರದರ್ಶನವಾಗದೆ ಅಂತರಂಗದ ದರ್ಶನವಾಗಬೇಕು

ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಜೂ.22;– ಯೋಗ ಮಾಡುವುದೆಂದರೆ ಅದು ಬಾಹ್ಯ ಪ್ರದರ್ಶನವಲ್ಲ. ಬದಲಿಗೆ ಅಂತರಂಗದ ದರ್ಶನ ನಿಜವಾದ ಯೋಗ. ಹಾಗಾಗಿ ಶ್ವಾಸದ ಮೂಲಕ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಆರೋಗ್ಯದ ದೇಹ ಮತ್ತು ಮನಸ್ಸನ್ನು ಹೊಂದಲು ಯೋಗ ಸಾಧನೆಯೊಂದೇ ನಿಜಮಾರ್ಗವೆಂದು ಅಂತಾರಾಷ್ಟಿçÃಯ ಖ್ಯಾತಿಯ ಯೋಗಗುರು ವೈದ್ಯಶ್ರೀ ಚೆನ್ನಬಸವಣ್ಣ ಸ್ವಾಮಿಗಳು ನುಡಿದರು.ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠ ವತಿಯಿಂದ ಅಂತಾರಾಷ್ಟಿçÃಯ ಯೋಗದಿನ ಅಂಗವಾಗಿ ಏರ್ಪಡಿಸಿರುವ ಮೂರುದಿನಗಳ ಯೋಗಸಂಭ್ರಮದ 2ನೇದಿನವಾದ ಇಂದು ಯೋಗಪ್ರಾತ್ಯಕ್ಷಿಕೆ ನೀಡುತ್ತ ಶ್ರೀಗಳು, ನಮ್ಮ ಆಹಾರ ಪದ್ಧತಿಯ ಜೀವನಶೈಲಿಯಲ್ಲಿ ಕ್ರಮಬದ್ಧತೆಯನ್ನು ರೂಢಿಸಿಕೊಂಡರೆ ಅರಿಷಡ್ವರ್ಗ ನಿರ್ವಹಿಸಿಕೊಂಡು ಆ ಮೂಲಕ ಆತ್ಮಸಾಕ್ಷಾತ್ಕಾರ ಪಡೆಯುವುದೆ ನಿಜವಾದ ಯೋಗ ಎಂದು ಪ್ರತಿಪಾದಿಸಿದರು.ಮುಂದುವರೆದು ಮಾತನಾಡಿದ ಅವರು, ಅನುಭಾವ ಎಂಬುದು ಅಂತರAಗದ ರತ್ನ. ಯೋಗದಿಂದ ದೇಹಕ್ಕಂಟಿದ ಅನೇಕ ಗಂಭೀರ ಕಾಯಿಲೆಗಳು ಹತೋಟಿಯಲ್ಲಿಡಲು ಸಾಧ್ಯ. ದೇಹವನ್ನು ಶುದ್ಧಪಾತ್ರಯನ್ನಾಗಿಸಿ ಅನುಭಾದ ಅಡುಗೆ ಮಾಡಬೇಕು. ನಮ್ಮ ದೇಹದ ತಲೆಯೇ ಕಾಶ್ಮೀರ. ಪಾದವೇ ಕನ್ಯಾಕುಮಾರಿ ಎಂದು ಪ್ರತಿಪಾದಿಸಿದ ಅವರು ಈ ಮನಸ್ಸು ನೆಮ್ಮದಿ ಮತ್ತು ಶಾಂತಿಯಿAದ ಕೂಡಿರಬೇಕಾದರೆ ನಮ್ಮಲ್ಲಿ ನಗುವಿರಬೇಕು. ಮನಸ್ಸು ಬಿಚ್ಚಿ ನಗಬೇಕು. ಚುಚ್ಚಿ ನಗಬಾರದು. ವ್ಯಂಗ್ಯದ ನಗುವು ಆಗಿರಬಾರದು. ಇದು ಅಪಾಯದ ಲಕ್ಷಣ ಎಂದು ಹೇಳಿದರು.ಹಾಗೆಯೇ ನಿಂತ ನೀರು ಹೇಗೆ ಮಲಿನವಾಗುತ್ತದೆಯೋ ನಮ್ಮ ದೇಹದ ರಕ್ತಸಂಚಾರವು ಮಲಿನದಿಂದ ಅಶುದ್ಧತೆಗೆ ಕಾರಣವಾಗಿ ಅನೇಕ ಕಾಯಿಲೆಗಳು ಬರುತ್ತವೆ. ಎಲ್ಲವನ್ನು ಅರಿತು ತನ್ನ ತಾನು ಅರಿಯದಿದ್ದರೆ ಫಲವೇನು ಎಂಬುದು ಶರಣಪ್ರಶ್ನೆಯಾಗಿದೆ. ಹಾಗಾಗಿ ನಾವು ಉಸಿರು ಇರುವವರೆಗೂ ಶಿವ ಅಥವಾ ಚೈತನ್ಯ ಸ್ವರೂಪಿಗಳು ಉಸಿರು ನಿಂತ ಮೇಲೆ ಶವವಾಗುತ್ತೇವೆ ಎಂದರು.ಆಯುರ್ವೇದ ಪದ್ಧತಿಯನ್ನು ಅನುಸರಿಸಿ ಹಿಂದಿನ ನಮ್ಮ ಪೂರ್ವಿಕರು 100ಕ್ಕಿಂತ ಹೆಚ್ಚುವರ್ಷಗಳ ಕಾಲ ಜೀವಿಸುತ್ತಿದ್ದರು. ಈಗ ಅದು 80, 60, ಮುಂದೆ 30 ಆಗುವ ಲಕ್ಷಣಗಳಿವೆ ಎಂದು ವಿಷಾದ ವ್ಯಕ್ತಪಡಿಸಿದರು.ನಮ್ಮ ದೇಹಕ್ಕೆ ಒಳ್ಳೆಯದನ್ನು ತೆಗೆದುಕೊಳ್ಳುವುದು ಕೆಟ್ಟದ್ದನ್ನು ಹೊರಹಾಕುವುದೇ ಯೋಗದ ಗುಣಧರ್ಮ. ತನು, ಮನ ಶುಚಿಗೊಳ್ಳುವುದೇ ಬಸವಯೋಗ, ಮೋಹವೇ ದೇವಾಲಯದ ಬಳಿಕ ಅನ್ಯದೇವರ ಹಂಗು ಏತಕ್ಕೆ ಎನ್ನುವ ಶರಣವಾಣಿಯಂತೆ ನಾವು ದೇಹ ಮತ್ತು ಮನಸ್ಸು ಶುದ್ಧವಾಗಿರಿಸಿಕೊಳ್ಳುವಲ್ಲಿ ನಮಗೆ ಯೋಗ ಮತ್ತು ಶಿವಯೋಗ ಸಹಾಯಕ್ಕೆ ಬರುತ್ತವೆ. ಬಸವಾದಿ ಶಿವಶರಣರು ಯೋಗಪ್ರವೀಣರು. ಆ ಬಗ್ಗೆ ಮಾರ್ಗದರ್ಶನ ನೀಡಿ ಹೋಗಿದ್ದಾರೆ. ಅದರ ಪಾಲನೆ ನಮ್ಮಿಂದ ನಿಮ್ಮಿಂದ ಆಗಬೇಕಿದೆ ಎಂದು ಕರೆ ನೀಡಿ ಅವರು ಯೋಗದ ವಿವಿಧ ಭಂಗಿಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಹೇಳುವ ಮತ್ತು ತೋರಿಸಿಕೊಡುವ ಮೂಲಕ ಸೇರಿದ ಯೋಗಾಸಕ್ತರ ಗಮನಸೆಳೆದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಯೋಗದಿಂದ ದೇಹಕ್ಕೆ ನವಚೈತನ್ಯ ಬರುತ್ತದೆ. ಕೆಲವು ಕಾಯಿಲೆಗಳ ಉಪಶಮನಕ್ಕೆ ಆಯುರ್ವೇದ ಗಿಡಮೂಲಿಕೆಗಳ ಔಷಧಿ ಪರಿಣಾಮಕಾರಿಯಾಗಿದೆ ಎಂದ ಅವರು, ವಿದ್ಯಾರ್ಥಿಗಳಿಗೆ ಯೋಗ ಒಂದು ರೀತಿಯಲ್ಲಿ ಜ್ಞಾನ ಹೆಚ್ಚಿಸುವಲ್ಲಿ ದಿವ್ಯಮಾರ್ಗವಾಗಿದೆ ಎಂದು ಪ್ರತಿಪಾದಿಸಿದರು.ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಯೋಗಾಚಾರ್ಯ ಎಲ್.ಎಸ್.ಚಿನ್ಮಯಾನಂದ ಅವರು ಉಪಸ್ಥಿತರಿದ್ದು ಚೆನ್ನಬಸವಣ್ಣ ಸ್ವಾಮೀಜಿಯವರಿಗೆ ಸಾಥ್ ನೀಡಿದರು.ಯೋಗಸಂಭ್ರಮದ ವೇದಿಕೆಯಲ್ಲಿ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮಿಗಳು, ಮೇದಾರಗುರುಪೀಠದ ಶ್ರೀ ಇಮ್ಮಡಿಬಸವ ಕೇತೇಶ್ವರ ಸ್ವಾಮಿಗಳು, ಚಿದರವಳ್ಳಿ-ಶಿರಸಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಕುಂಬಾರ ಗುರುಪೀಠದ ಶ್ರೀ ಬಸವಕುಂಬಾರ ಗುಂಡಯ್ಯ ಸ್ವಾಮಿಗಳು ಹಾಗೂ ಲಂಬಾಣಿ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳು ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಶ್ರೀಮಠದ ಅಭಿಮಾನಿಗಳು, ಸಾರ್ವಜನಿಕರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಜಮುರಾ ಕಲಾವಿದರಿಂದ ವಚನಗಾಯನ ನಡೆಯಿತು. ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಅಧ್ಯಾಪಕಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.