ರಕ್ಷಾ ಫೌಂಡೇಷನ್‌ನಿಂದ ಉಚಿತವಾಗಿ 2 ಲಕ್ಷನೋಟ್ ಪುಸ್ತಕಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ
ಬೆಂಗಳೂರು.ಜೂ೨೨:ಚಂದ್ರಗುಪ್ರ ಮೌರ್ಯ(ಶಾಲಿನಿ)ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ (ರಿ)ವತಿಯಿಂದ ೧೨ನೇ ವರ್ಷದ ಕರ್ನಾಟಕ ವಿವಿಧ ಶಾಲೆಗಳ ೧೦ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ೨ಲಕ್ಷ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಮತ್ತು ಎಸ್.ಎಸ್.ಎಲ್.ಸಿ.ಪಿಯಿ ಶೇಕಡ ೯೦%ರಷ್ಟು ಅಂಕಗಳಿಸಿದ ವಿದ್ಯಾರ್ಥಿವಿದ್ಯಾರ್ಥಿನಿಯರಿಗೆ ನಗದು ಬಹುಮಾನ, ಸನ್ಮಾನ ಮತ್ತು ಅನಾಥ ಆಶ್ರಮದ ೨ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ಸಾರ್ವಜನಿಕರಿಗೆ ಉಚಿತ ಅಂಬುಲೆನ್ಸ್ ಸೇವೆ ಲೋಕರ್ಪಣೆ ಸಮಾರಂಭ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ದಿವ್ಯ ಸಾನ್ನಿಧ್ಯ ಸಿದ್ದಗಂಗಾ ಮಠದ ಪರಮಪೂಜ್ಯ ಸಿದ್ದಲಿಂಗಾ ಮಹಾಸ್ವಾಮೀಜಿ ವಹಿಸಿದ್ದರು. ಲೋಕಸಭಾ ಸದಸ್ಯರಾದ ತೇಜಸ್ವಿಸೂರ್ಯ, ಚಲನಚಿತ್ರ ನಟ ಕಿಚ್ಚ ಸುದೀಪ್, ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿ.ಕೆ. ರಾಮಮೂರ್ತಿರವರು, ಶಾಸಕರುಗಳಾದ ಉದಯ್ ಗರುಡಾಚಾರ್, ಸತೀಶ್ ರೆಡ್ಡಿ, ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್, ಮಾಜಿ ಬಿಬಿಎಂಪಿ ಮಾಜಿ ಸದಸ್ಯೆ ನಾಗರತ್ನ ರಾಮಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಿದ್ದಗಂಗಾ ಮಠದ ಸಿದ್ದಲಿಂಗಾ ಸ್ವಾಮೀಜಿರವರು ಮಾತನಾಡಿ ಸಾಮಾಜಿಕ ಸೇವಾ ಸಂಘಟನೆಗಳು ಸಹ ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಅದರಲ್ಲಿ ರಕ್ಷಾ ಫೌಂಡೇಷನ್ ಮಕ್ಕಳ ಶಿಕ್ಷಣದ ಉನ್ನತಿಗಾಗಿ ನೋಟ್ ಪುಸ್ತಕ ವಿತರಿಸುತ್ತಿದ್ದಾರೆ.ಹತ್ತಾರು ಜನರ ಸೇವೆ ಮಾಡುವುದು ದೇವರ ಕೆಲಸ .ಶಿಕ್ಷಣದಿಂದ ಮಾತ್ರ ಶಕ್ತಿ ಬರುತ್ತದೆ, ಜ್ಞಾನಕ್ಕೆ ಸಮಾನಾದ ಯಾವುದು ಇಲ್ಲ.ಸಮಾಜದಲ್ಲಿ ಜ್ಞಾನವಂತರೆ ನೀಜವಾದ ಶ್ರೀಮಂತ, ಸಮಾಜದಲ್ಲಿ ಅವರಿಗೆ ಗೌರವ ಸಿಗುತ್ತದೆ.ಮಕ್ಕಳಿಗೆ ಆಸರೆಯಾಗಿ ರಕ್ಷಾ ಫೌಂಡೇಷನ್ ಶ್ರಮಿಸುತ್ತಿದೆ.ಸರ್ಕಾರಿ ಶಾಲೆಯ ಮಕ್ಕಳು ಪ್ರತಿಭಾವಂತರು ಅವರಿಗೆ ಪ್ರೋತ್ಸಹ ಸಹಕಾರ ನೀಡಬೇಕು.
ಪರಿಶ್ರಮ, ಪ್ರಯುತ್ನವಿರುವ ಎಲ್ಲ ಮಕ್ಕಳು ಪ್ರತಿಭಾವಂತರು.ನಿರಂತರ ಪ್ರಯುತ್ನದಿಂದ ಸಾಧಕರಾಗಿ ಬೆಳಯಬಹುದು ಎಂದು ಹೇಳಿದರು.ನಟ ಕಿಚ್ಚಸುದೀಪ್ ಮಾತನಾಡಿ ಮಕ್ಕಳ ದೇವರ ಸಮಾನ, ಅವರ ಜೊತೆ ಭಾಗವಹಿಸುವುದು ಸಂತೋಷಕರವಾದ ವಿಷಯ.
೧೨ವರ್ಷಗಳ ಹಿಂದೆ ನೂರು ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಆರಂಭಿಸಿ, ಇಂದು ೨ ಲಕ್ಷ ನೋಟ್ ಪುಸ್ತಕ ಉಚಿತವಾಗಿ ವಿತರಿಸಲಾಗುತ್ತಿದೆ. ಶ್ರೀಮಂತ ಕುಟುಂಬದ ಮಕ್ಕಳಿಗೆ ಸಿಗುವ ಶಿಕ್ಷಣ ಬಡ ಮಕ್ಕಳಿಗೂ ಸಿಗಬೇಕು, ಅವರ ಸಹ ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿ ತರಬೇಕು ಎಂಬುದು ರಕ್ಷಾ ಫೌಂಡೇಷನ್ ಸಂಸ್ಥೆಯ ಉದ್ದೇಶವಾಗಿದೆ.
ಮಾಜಿ ಬಿಬಿಎಂಪಿ ಸದಸ್ಯರುಗಳಾದ ಸೋಮಶೇಖರ್, ಶ್ರೀಮತಿ ಲಕ್ಷ್ಮಿನಟರಾಜ್, ಶ್ರೀಮತಿ ಮಾಲತಿ ಸೋಮಶೇಖರ್, ಶ್ರೀಮತಿ ದೀಪಿಕಾ ಎಲ್.ಮಂಜುನಾಥರೆಡ್ಡಿರವರು ಉಪಸ್ಥಿತರಿದ್ದರು.