ಬಿಜೆಪಿ ಕಾರ್ಮಿಕರ ಪ್ರಕೋಷ್ಠದಿಂದ ಯೋಗ ದಿನಾಚರಣೆ
ಬೆಂಗಳೂರು.ಜೂ. ೨೨- ಬಿಜೆಪಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠವತಿಯಿಂದ ಯೋಗ ದಿನಾಚರಣೆ ಆಚರಿಸಲಾಯಿತು.
ಸಿ.ವಿ.ರಾಮನ್ ನಗರದ ಯೋಗ ಶಿಕ್ಷರ ಕೆ.ಷಣ್ಮುಗಂ ನೇತೃತ್ವದಲ್ಲಿ ಕನ್ನಡ ಮತ್ತು ತಮಿಳು ಶಾಲೆಗಳಿಗೆ ತೆರೆಳಿ ಬಡ ಮಕ್ಕಳೊಂದಿಗೆ ಯೋಗ ದಿನಾಚರಣೆ ಆಚರಿಸಲಾಯಿತು. ಮಕ್ಕಳಿಗೆ ಮತ್ತು ಶಾಲಾ ಸಿಬ್ಬಂದಿಗಳಿಗೆ ಯೋಗದ ಬಗ್ಗೆ ಅರಿವು ಮೂಡಿಸಲಾಯಿತು.
ಯೋಗದಿಂದ ಹೇಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತದೆ ಎಂಬುದರ ಬಗ್ಗೆ ವಿವರಿಸಲಾಯಿತು. ಜತೆಗೆ ಯೋಗವನ್ನು ಮಕ್ಕಳಿಗೆ ಹೇಳಿಕೊಡಲಾಯಿತು. ಮಕ್ಕಳು ಯೋಗ ಮಾಡಿ ಸಂತಸಪಟ್ಟರು.
ಬಿಜೆಪಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ಕಳೆದ ಮೂರು ವರ್ಷಗಳಿಂದ ಕನ್ನಡ ಶಾಲೆಯ ಮಕ್ಕಳಿಗೆ ಉಚಿತವಾಗಿ ಯೋಗ ಹೇಳಿಕೊಡಲಾಗುತ್ತಿದೆ.