ಯಶಸ್ಸು ಪಡೆಯಲು ಯೋಗ ಕ್ರೀಡೆ ಜೀವನದಲ್ಲಿ ಅಳವಡಿಸಿಕೊಳ್ಳಿ
ಬೀದರ:ಜೂ.22: ಜೀವನದಲ್ಲಿ ಯಶಸ್ಸು ಕಾಣಲು ಓದಿನ ಜೊತೆಗೆ ಯೋಗ ಮತ್ತು ಕ್ರೀಡೆಯಲ್ಲೂ ಸಮನಾಗಿ ಭಾಗವಹಿಸಬೇಕು ಎಂದು ಕೆಪಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಾಬುವಾಲಿಯವರು ವಿದ್ಯಾರ್ಥಿಗಳಿಗೆ ಹೇಳಿದರು. 10ನೇ ಅಂತರಾಷ್ಟ್ರೀಯ ಯೋಗ ದಿನಚಾರಣೆಯನ್ನು ಕೆಪಿ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ಯೋಗ ಕಲಿಸುವ ಮೂಲಕ ಆಚರಿಸಲಾಯಿತು. ಯೋಗ ಶಿಕ್ಷಕಿ ಕುಮಾರಿ ಜ್ಯೋತಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಯೋಗದ ವಿವಿಧ ಭಂಗಿಗಳು ಮತ್ತು ಆ ಭಂಗಿಗಳಿಂದ ನಮ್ಮ ಶರೀರಕ್ಕೆ ಸಿಗುವ ಲಾಭಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಕೆಪಿ ವಿದ್ಯಾ ಸಂಸ್ಥೆಯ ಕನ್ಯಾಕ ಪರಮೇಶ್ವರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಮುಖ್ಯ ಗುರುಗಳಾದ ವಿಜಯಕುಮಾರ ಪಾಟೀಲ ಯರನಳ್ಳಿ, ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.