ಸಂಶೋಧನಾ ವಿಧಾನ ಕಾರ್ಯಗಾರ
ಕೋಲಾರ,ಜೂ,೨೨- ನಗರದ ಶ್ರೀ ದೇವರಾಜ ಅರಸು ನರ್ಸಿಂಗ್ ಕಾಲೇಜಿನ ಸಂಶೋಧನಾ ಮತ್ತು ಅಭಿವೃದ್ಧಿ ಸಮಿತಿ ವಿಭಾಗದಿಂದ ಸಂಶೋಧನಾ ವಿಧಾನದ ಕಾರ್ಯಗಾರ ಆಯೋಜಿಸಲಾಗಿತ್ತು.
ಜೂ.೧೯ ಮತ್ತು ೨೦ ರಂದು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಾಗಾರವನ್ನು ಆಹ್ವಾನಿತರು ಹಾಗೂ ಕಾರ್ಯಾಗಾರಕ್ಕೆ ಆಗಮಿಸಿದ ವಿವಿಧ ಕಾಲೇಜುಗಳ ಪ್ರತಿನಿಧಿಗಳು ಗಿಡಗಳಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಈ ಸಂಶೋಧನಾ ವಿಧಾನದ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳನ್ನು ೫ ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿನ ವಿದ್ಯಾರ್ಥಿಗಳಿಗೆ ಸಂಶೋಧನಾ ವಿದ್ಯಾರ್ಥಿ ಕೇಂದ್ರಿತ ಬೋಧನೆಯ ನವೀನ ಬೋಧನಾ ವಿಧಾನವನ್ನು ಆಯೋಜಿಸಲಾಯಿತು.
ಈ ಎರಡು ದಿನದ ಸಂಶೋಧನಾ ವಿಧಾನದ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸಂಶೋಧನಾ ಹಂತಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕೋಲಾರ ಜಿಲ್ಲೆಯ ವಿವಿಧ ನಸಿಂಗ್ ಕಾಲೇಜುಗಳ ಸುಮಾರು ೨೩೫ ವಿದ್ಯಾರ್ಥಿಗಳು ಹಾಗೂ ೩ ಶಿಕ್ಷಣಾ ಸಂಸ್ಥೆಗಳ ಬೋಧಕರು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡರು.
ಶ್ರೀ ದೇವರಾಜ ಅರಸು ನರ್ಸಿಂಗ್ ಕಾಲೇಜು ಆಡಳಿತ ಮಂಡಳಿಯು ಕಾರ್ಯಾಗಾರದ ಆತಿಥ್ಯವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟಿತು.