ಎಸ್ಸೆಸ್ಸೆಲ್ಸಿ ಪರೀಕ್ಷೆ-೨ ವಿಜ್ಞಾನ ಪರೀಕ್ಷೆ ಯಶಸ್ವಿ
ಕೋಲಾರ,ಜೂ,೨೨- ಜಿಲ್ಲೆಯ ೧೭ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-೨ರ ವಿಜ್ಞಾನ ವಿಷಯದ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇಂದು ಪರೀಕ್ಷೆಗೆ ಜಿಲ್ಲೆಯ ೩೮೫ ಪ್ರೌಢಶಾಲೆಗಳ ೫೦೫೭ ಮಂದಿ ನೋಂದಣಿ ಮಾಡಿದ್ದು, ೫೮೩ ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೇ ಪರೀಕ್ಷೆ ನಡೆದಿದೆ, ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ ೫೦೫೭ ಮಂದಿ ಪೈಕಿ ೪೪೭೪ ವಿದ್ಯಾರ್ಥಿಗಳ ಹಾಜರಾಗಿದ್ದು, ೫೮೩ ಮಂದಿ ಗೈರಾಗಿದ್ದರು ಎಂದು ತಿಳಿಸಿದರು.
ಬಂಗಾರಪೇಟೆ ತಾಲ್ಲೂಕಿನ ೩ ಕೇಂದ್ರಗಳಲ್ಲಿ ವಿಜ್ಞಾನ ವಿಷಯಕ್ಕೆ ಒಟ್ಟು ೯೬೦ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, ೮೩೪ವಿದ್ಯಾರ್ಥಿಗಳು ಹಾಜರಾಗಿ ೧೨೬ ಮಂದಿ ಗೈರಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನ ೩ ಕೇಂದ್ರಗಳಲ್ಲಿ ೧೧೪೯ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ೧೦೭೨ ಮಂದಿ ಹಾಜರಾಗಿ ೭೭ ಮಂದಿ ಗೈರಾಗಿದ್ದಾರೆ. ಕೋಲಾರದ ೫ ಕೇಂದ್ರಗಳಲ್ಲಿ ೯೯೦ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ ೮೬೭ ಮಂದಿ ಹಾಜರಾಗಿ ೧೨೩ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಮಾಲೂರಿನ ೨ ಕೇಂದ್ರಗಳಲ್ಲಿ ೮೩೩ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ೭೨೫ ಮಂದಿ ಹಾಜರಾಗಿ ೧೦೮ ಮಂದಿ ಗೈರಾಗಿದ್ದಾರೆ. ಮುಳಬಾಗಿಲಿನ ೩ ಕೇಂದ್ರಗಳಲ್ಲಿ ೭೯೮ ಮಂದಿ ನೋಂದಾಯಿಸಿದ್ದು, ಈ ಪೈಕಿ ೬೯೧ ಮಂದಿ ಹಾಜರಾಗಿ ೧೦೭ಮಂದಿ ಗೈರಾಗಿದ್ದಾರೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ೧ ಕೇಂದ್ರದಲ್ಲಿ ೩೨೭ ಮಂದಿ ನೋಂದಾಯಿಸಿದ್ದು, ೨೮೫ ಮಂದಿ ಹಾಜರಾಗಿ ೪೨ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ನಾಲ್ಕನೇ ದಿನದ ವಿಜ್ಞಾನ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಾವುದೇ ಕೇಂದ್ರದಲ್ಲಿ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.