ಎಸ್ಸೆಸ್ಸೆಲ್ಸಿ ಪರೀಕ್ಷೆ-2 ದ್ವಿತೀಯ ಭಾಷೆ ಪರೀಕ್ಷೆ ಯಶಸ್ವಿ
ಕೋಲಾರ,ಜೂ,೨೨- ಜಿಲ್ಲೆಯ ೧೭ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-೨ರ ದ್ವಿತೀಯ ಭಾಷೆ ಕನ್ನಡ, ಇಂಗ್ಲಿಷ್ ವಿಷಯದ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇಂದು ಪರೀಕ್ಷೆಗೆ ಜಿಲ್ಲೆಯ ೩೮೫ಪ್ರೌಢಶಾಲೆಗಳ ೩೫೩೨ ಮಂದಿ ನೋಂದಣಿ ಮಾಡಿದ್ದು, ೩೦೬೨ ಮಂದಿ ಹಾಜರಾಗಿ ೪೭೦ ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೇ ಪರೀಕ್ಷೆ ನಡೆದಿದೆ ಮತ್ತು ಎಲ್ಲೂ ಅವ್ಯಾವಹಾರಗಳು ನಡೆದ ಬಗ್ಗೆ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.
ತಾಲ್ಲೂಕುವಾರು ಕೇಂದ್ರಗಳ ವಿವರ
ಬಂಗಾರಪೇಟೆ ತಾಲ್ಲೂಕಿನ ೩ ಕೇಂದ್ರಗಳಲ್ಲಿ ದ್ವಿತೀಯ ಭಾಷೆ ವಿಷಯಕ್ಕೆ ಒಟ್ಟು ೭೪೫ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, ೬೪೦ ವಿದ್ಯಾರ್ಥಿಗಳು ಹಾಜರಾಗಿ ೧೦೫ ಮಂದಿ ಗೈರಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನ ೩ ಕೇಂದ್ರಗಳಲ್ಲಿ ೮೩೧ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ೭೬೧ ಮಂದಿ ಹಾಜರಾಗಿ ೭೦ ಮಂದಿ ಗೈರಾಗಿದ್ದಾರೆ. ಕೋಲಾರದ ೫ ಕೇಂದ್ರಗಳಲ್ಲಿ ೬೮೫ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ ೫೮೧ ಮಂದಿ ಹಾಜರಾಗಿ ೧೦೪ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಮಾಲೂರಿನ ೨ ಕೇಂದ್ರಗಳಲ್ಲಿ ೫೨೪ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ೪೪೫ ಮಂದಿ ಹಾಜರಾಗಿ ೭೯ ಮಂದಿ ಗೈರಾಗಿದ್ದಾರೆ. ಮುಳಬಾಗಿಲಿನ ೩ ಕೇಂದ್ರಗಳಲ್ಲಿ ೫೬೫ ಮಂದಿ ನೋಂದಾಯಿಸಿದ್ದು, ಈ ಪೈಕಿ ೪೭೯ ಮಂದಿ ಹಾಜರಾಗಿ ೮೬ ಮಂದಿ ಗೈರಾಗಿದ್ದಾರೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ೧ ಕೇಂದ್ರದಲ್ಲಿ ೧೮೨ ಮಂದಿ ನೋಂದಾಯಿಸಿದ್ದು, ೧೫೬ ಮಂದಿ ಹಾಜರಾಗಿ ೨೬ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಐದನೇ ದಿನದ ದ್ವಿತೀಯ ಭಾಷೆ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆದಿದ್ದು, ಡಿಡಿಪಿಐ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಜಯಣ್ಣ, ಶಿಕ್ಷಣಾಧಿಕಾರಿಗಳಾದ ಸಗೀರಾ ಅಂಜುಂ, ಭಾಗ್ಯವತಮ್ಮ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ಶಂಕರೇಗೌಡ, ವೆಂಕಟೇಶಬಾಬು ಮತ್ತಿತರರು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.