ವಿಷ ವಿಜ್ಞಾನ 19ನೇ ರಾಷ್ಟ್ರೀಯ ಸಮ್ಮೇಳನ
ಕೋಲಾರ,ಜೂ.೨೦- ವಿಷ ವೈದ್ಯ ಶಾಸ್ತ್ರ ಸಜೀವಿಗಳ ಮೇಲೆ ರಾಸಾಯನಕಗಳಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಅಧ್ಯಾಯನ ಮಾಡುವುದು, ಇದು ವಿಷ ಪರಿಣಾಮದ ಲಕ್ಷ್ಮಣಗಳ ಯಾಂತ್ರಿಕ ವ್ಯವಸ್ಥೆಯ ಚಿಕಿತ್ಸಾ ಕ್ರಮಗಳು ಮತ್ತು ಅದನ್ನು ಪತ್ತೆ ಹಚ್ಚುವುದರ ಅಧ್ಯಯನ ವಾಗಿದೆ ಮುಖ್ಯವಾಗಿ ಜನರ ಮೇಲೆ ಉಂಟಾಗುವ ವಿಷ ಪರಿಣಾಮಗಳ ಬಗ್ಗೆ ಇಂಡಿಯನ್ ಸೊಸೈಟಿ ಆಫ್ ಟಾಕ್ಸಿಕಾಲಜಿ ಪ್ರೆಸಡಿಂಟ್ ಡಾ.ಸುಜಾತ ರಾಥೋಡ್ ಬಿ.ಎಲ್. ವಿಶೇಷಿಸಿದರು,
ನಗರ ಹೊರವಲಯದ ಟಮಕದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಜತ ಸಭಾಂಗಣದಲ್ಲಿ ಇಂಡಿಯನ್ ಸೊಸೈಟಿ ಆಫ್ ಟಾಕ್ಸಿಕಾಲಜಿ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ಎರಡು ದಿನದ ೧೯ನೇ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಾತ್ಯೇಕ್ಷಿಕೆಯ ವಿಡೀಯೋದಲ್ಲಿ ಅವರು ಸಂದೇಶವನ್ನು ನೀಡಿದರು,
ಉಪಕುಲ ಸಚಿವೆ ಪ್ರೋ.ಡಾ,ಬಿ ವೆಂಗಮ್ಮ ಮಾತನಾಡಿ ವಿಷ ವೈದ್ಯ ಶಾಸ್ತ್ರದ ಇತಿಹಾಸ, ಜೈವಿಕ ಪದಾರ್ಥಗಳ ವಿಷ ಪರಿಣಾಮ, ವಿಷ ವೈದ್ಯ ಶಾಸ್ತ್ರದ ಕಟ್ಟುಪಾಡುಗಳು, ರಾಸಾಯನಿಕ ವಿಷವೈದ್ಯ ಶಾಸ್ತ್ರ ಕುರಿತು ವಿವರಿಸಿದ ಅವರು ವಿಷ ಒಂದು ವಸ್ತು, ನೈಸರ್ಗಿಕ ಅಥವಾ ಸಂಶ್ಲೇಷತೆ ಇದು ಜೀವಂತ ಅಂಗಾಂಶಗಳನ್ನು ಹಾನಿ ಗೊಳಿಸುತ್ತದೆ ಮತ್ತು ದೇಹದ ಮೇಲೆ ಹಾನಿಕರ ಮತ್ತು ಮಾರಣಾಂತಿಕಪರಿಣಾಮಗಳನ್ನು ಬೀರುತ್ತದೆ, ಕೀಟನಾಶಕ ವಿಷ-ಬೆಳೆ ವಿಜ್ಞಾನ ಭಾರತ ಕುರಿತಂತೆ ತಿಳಿಸಿ ಕೊಟ್ಟರು,
ಜಂಟಿ ನಿರ್ದೇಶಕ ರಾಘವೇಂದ್ರ ಮಾತನಾಡಿ ತುರ್ತು ಸಂದರ್ಭದಲ್ಲಿನ ಅರೈಕೆಯ ವೈದ್ಯಕೀಯ ವಿಧಾನಗಳು, ಮುಂಜಾಗೃತೆಯ ವೈದ್ಯಕೀಯ ವಿಧಾನ, ವೈದ್ಯಕೀಯ ಅರಿವು, ರಾಜ್ಯದಲ್ಲಿ ವೈದ್ಯಕೀಯ ಪ್ರಗತಿಯ ಸಾಧನೆಗಳ ಕುರಿತು ವಿಶ್ಲೇಷಿಸಿದರು,
,ಟ್ರಸ್ಟ್‌ನ ಉಪಾಧ್ಯಕ್ಷ ರಾಜೇಂದ್ರ ಮಾತನಾಡಿ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಸಾಧನೆಗಳಿಗೆ ಸಂಸ್ಥಾಪಕ ದಿ.ಆರ್.ಎಲ್. ಜಾಲಪ್ಪ ಅವರ ಸಾಮಾಜಿಕ ಕಾಳಜಿ ಕುರಿತು ಪ್ರಶಂಸಿಸಿದರು,
ಇದೇ ಸಂದರ್ಭದಲ್ಲಿ ವಿಷ ವಿಜ್ಞನ ಅಧ್ಯಾಯನ ಪುಸ್ತಕ ಬಿಡುಗಡೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಡಾ.ವೆಂಕಟರಾಘವ, ಆರ್ಗನೈಜಿಂಗ್ ಚೇರ್‍ಮನ್ ಡಾ.ಅಜಯಕುಮಾರ್ ಟಿ.ಎಸ್, ಡೀನ್ ಡಾ.ಪ್ರಭಾಕರ್, ಡಾ,ಅರವಿಂದ್,ಎನ್. ವೈದ್ಯಕೀಯ ಅಧೀಕ್ಷ ಡಾ.ಕೃಷ್ಣಪ್ಪ, ಉಪಪ್ರಾಂಶುಪಾಲ ಡಾ.ವಿನೂತ ಶಂಕರ್ ಉಪಸ್ಥಿತರಿರುವರು.