ಜೂ, 22ಕ್ಕೆ ಆದಿಮದಲ್ಲಿ ಮಕ್ಕಳ ನಾಟಕೋತ್ಸವ
ಕೋಲಾರ,ಜೂ.೨೨- ಶಿವಗ೦ಗೆ ತೇರಹಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹುಣ್ಣಿಮೆ ಹಾಡು-೨೦೬ ರ ಪ್ರಯುಕ್ತ ಜೂ, ೨೨ರ ಶನಿವಾರ ಸಂಜೆ ೭ ಕ್ಕೆ ಮಕ್ಕಳ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ನಮ್ಮೊಂದಿಗೆ ಕರ್ನಾಟಕ ಸರ್ಕಾರ(ನೇತ್ರ) ಜಂಟಿ ನಿರ್ದೇಶಕ ಡಾ.ಜಿ.ಶ್ಯಾಮ ಸುಂದರ್, ಸಮುದಾಯ ಕಾರ್ಯದರ್ಶಿ ವಿ.ಎನ್.ಸುಬ್ರಮಣಿ, ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಕುಪ್ಪಳ್ಳಿ ವೆಂಕಟಮ್ಮ ನಾರಾಯಣಪ್ಪ, ಗರಿಕೆ ಸಾಂಸ್ಕೃತಿಕ ಕೇಂದ್ರದ
ಕಿರಣ್.ವಿ.ಆರ್, ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ, ಕಾರ್ಯದರ್ಶಿ ಉಪಸ್ಥಿತರಿರುವರು.
ಅಂದು ೨ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಕೋಟಿಗಾನಹಳ್ಳಿ ರಾಮಯ್ಯ ರಚನೆ, ಶೃಂಗಾರ್ ನಿರ್ದೇಶನ, ನವ್ಯ, ನರೇಶ್ ಮತ್ತು ತುರಾಂಡಹಳ್ಳಿ ಶ್ರೀನಿವಾಸ್ ಅವರ ಸಂಗೀತ, ಬುಡ್ಡೀದೀಪ ಹಾಗೂ ಕೆಇಬಿ ನೌಕರರ ಮಕ್ಕಳು ತಂಡದಿಂದ ಕುಸ್ ಕುಸ್ ದಿಲ್ ಕುಶ್ ನಾಟಕ ಅಭಿನಯಿಸಲ್ಪಡುತ್ತದೆ.
ಮತ್ತೊಂದು ನಾಟಕ ಕೋಟಿಗಾನಹಳ್ಳಿ ರಾಮಯ್ಯ ರಚನೆ, ಗರಿಕೆ ಮಂಜು ಅನುಕೂಲಿಗರು, ಸೋಮಶೇಖರ್.ಜಿ ಪರಿಕರ, ಕಾರಮಾನಹಳ್ಳಿ ಗರಿಕೆ ಸಾಂಸ್ಕೃತಿಕ ಕೇಂದ್ರ ತಂಡದಿಂದ ನಾಟಕ ಪ್ರದರ್ಶಿಸಲ್ಪಡುತ್ತದೆ.
ಆದಿಮದಲ್ಲಿ ನಡೆಯುವ ಹುಣ್ಣಿಮೆ ಹಾಡು ಕಾರ್ಯಕ್ರಮಕ್ಕೆ ಕೋಲಾರ ಹೊಸ ಬಸ್ ನಿಲ್ದಾಣದಿಂದ ಸಂಜೆ ೬ಕ್ಕೆ ಬಸ್ ಹೊರಡಲಿದ್ದು, ಕಾರ್ಯಕ್ರಮ ಮುಗಿದ ನಂತರ ಹೊಸ ಬಸ್ ನಿಲ್ದಾಣಕ್ಕೆ ಬರಲಿದೆ.