ಟಿ.ಎ.ಪಿ.ಸಿ.ಎಂ.ಎಸ್ ಅಧುನಿಕರಣ: ಸಂಸದ ಮಲ್ಲೇಶ್
ಕೋಲಾರ,ಜೂ,೨೨- ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರುಕಟ್ಟೆ ಸಂಸ್ಥೆಯ ಅಧುನೀಕರಣ ಮಾಡಲು ಅಧಿಕೃತವಾಗಿ ಅಧಿಕಾರ ವಹಿಸಿ ಕೊಂಡ ನಂತರ ಬರಲಿರುವ ಸಂಸದರ ಅನುದಾನದಲ್ಲಿ ಮಾಡಿ ಕೊಡುವುದಾಗಿ ಸಂಸದ ಎಂ.ಮಲ್ಲೇಶ್ ಬಾಬು ಭರವಸೆ ನೀಡಿದರು,
ನಗರದ ಟಿ.ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ವಡಗೂರು ರಾಮು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ನೊತನ ಸಂಸದರಿಗೆ ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿದ ಅವರು ಮಾತನಾಡಿದರು.
ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡ ನವೀಕರಣಕ್ಕೆ ಹಾಗೂ ಇತರೆಗಳಿಗೆ ಅನುದಾನದ ಕೊರತೆಯ ಹಿನ್ನಲೆಯಲ್ಲಿ ನಿರ್ದೇಶಕರುಗಳು ತಮ್ಮ ಬೇಡಿಕೆಯನ್ನು ಮುಂದಿಟ್ಟಾಗ ಸಂಸದರು ಈಡೇರಿಸಿ ಕೊಡುವ ಆಶ್ವಾಸನೆ ನೀಡಿದರು,
ದೆಹಲಿಯಲ್ಲಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕಾರದ ನಂತರ ಕೇಂದ್ರ ಸರ್ಕಾರವು ಸಂಸದರಿಗೆ ಬಿಡುಗಡೆ ಮಾಡಲಿರುವ ಅನುದಾನದಲ್ಲಿ ಪ್ರಥಮ ಹಂತದಲ್ಲಿಯೇ ಟಿ.ಪಿ.ಸಿ.ಎಂ.ಸಿ. ಅಧುನೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೆನೆ. ಅಧುನೀಕರಣಕ್ಕೆ ಅಗತ್ಯವಾದ ಅಂದಾಜು ವೆಚ್ಚದ ಕ್ರಿಯಾ ಯೋಜನೆಯನ್ನು ರೂಪಿಸಿ ಸಿದ್ದಪಡೆಸಿರಲು ಸೂಚಿಸಿದರು.
ನಾನು ಸಂಸದನಾಗಿ ಕೇಂದ್ರದಿಂದ ದೊರೆಯ ಬಹುದಾದ ಪಡಿತರ ಹಾಗೂ ರಾಸಾಯನಿಕ ಗೊಬ್ಬರ ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಸಂಸ್ಥೆಗೆ ಕಲ್ಪಿಸಿ ಕೊಡುವ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ಮಾಜಿ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಾಗನಾಳ ಸೋಮಣ್ಣ, ದಕ್ಷಿಣ ಕಸಬಾ ಸೂಸೈಟಿಯ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ, ತಂಬಳ್ಳಿ ಮುನಿಯಪ್ಪ, ಮುಂತಾದವರು ಇದ್ದರು,