ಆರೋಗ್ಯದ ಗುಟ್ಟು ಯೋಗದಲ್ಲಿದೆ:ಶ್ರೀ ಶಾಮ್ ಜೀ ರವರು
ಆನೇಕಲ್.ಜೂ. ೨೨ – ಪ್ರತಿಯೊಬ್ಬರೂ ಆರೋಗ್ಯವಾಗಿ ಜೀವನ ನಡೆಸಬೇಕಾದರೆ, ನಿತ್ಯಾ ಯೋಗ, ಧ್ಯಾನ ಮಾಡಿ ಎಂದು ಶ್ರೀ ಸಾಯಿ ಸರ್ವೋಧಯ ಯೋಗ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಶ್ರೀ ಶಾಮ್ ಜೀ ರವರು ತಿಳಿಸಿದರು.
ಅವರು ಹೆಬ್ಬಗೋಡಿ ಯಲ್ಲಿ ಶ್ರೀ ಸಾಯಿ ಸರ್ವೋಧಯ ಯೋಗ ಪೌಂಡೇಷನ್ ವತಿಯಿಂದ ನಡೆದ ೧೦ ನೇ ಅಂತರಾಷ್ಠೀಯ ಯೋಗ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಗಬ್ಯಾಸ ರೋಗವನ್ನು ದೂರ ಮಾಡುವ ಶಕ್ತಿ ಹೊಂದಿದೆ, ಪ್ರತಿಯೊಬ್ಬರು ಜೀವನದಲ್ಲಿ ಒಂದು ಬಾಗ ಯೋಗವನ್ನು ಅಳವಡಿಸಿಕೊಳ್ಳಬೇಕು ಆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು ಎಂದರು. ಅಂತರಾಷ್ಠೀಯ ಯೋಗಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು ಪ್ರತಿ ದಿನ ಯೋಗಾಬ್ಯಾಸ ಮಾಡುವುದರಿಂದ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮಕಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಸರಳ ಯೋಗ ಮತ್ತು ಸ್ನೇಹಾಂಜಲಿ ಭಜಜಾ ಸಂಗ್ರಹ ಎಂಬ ಪುಸ್ತಕವನ್ನು ಗಣ್ಯರು ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್,ಎಸ್,ವೈನ ಮಹಾ ಆಚಾರ್ಯರಾದ ಶ್ರೀ ರವಿಶಂಕರ್ ಜೀ, ಆದ್ಯಾತ್ಮಿಕ ಚಿಂತಕರಾದ ರಾಮಣ್ಣ ಸ್ವಾಮಿಗಳು, ಮಾತಾಜಿ ನಳಿನಾ ಶಾಂತಕುಮಾರಿ ಅಮ್ಮನವರು. ಆಚಾರ್ಯರಾದ ವೆಂಕಟಸ್ವಾಮಿರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಆದೂರು ಪ್ರಕಾಶ್, ಬಿಇಟಿಪಿಎಲ್ ಪ್ರೊಜೆಕ್ಟ್ ಮ್ಯಾನೇಜರ್ ಶ್ರೀನಿವಾಸ್ ಗೌಡರು, ಮ್ಯಾನೇಜರ್ ಕಾಪ್ಟನ್ ಭಲದೇವ್ ಸಿಂಗ್, ಸನ್ ಸೆರಾ ಕಂಪನಿಯ ಆನಂದ್, ಎಸ್.ಗುರುದತ್ತಾ, ಮಸುಸೂದನ್ ನಾಯಕ್, ಎಸ್.ಎಸ್.ವೈನ ಶಿವಶಂಕರೆಡ್ಡಿಜೀ, ಮಂಜುಳಾ ಶಿವಶಂಕರ್ ರೆಡ್ಡಿ, ಪಿಎಂಎಸ್ ಕಂಪನಿಯ ಸತ್ಯನಾರಾಯಣ, ಸಾಯಿ ಬಾಬಾ ದೇವಾಲಯದ ದರ್ಮದರ್ಶಿಗಳಾದ ಎಲ್.ಎನ್.ಬಾಬು, ಆಂತೆಮ್ ಕಂಪನಿಯ ಶಂಕರ್ ರಂಗನಾಥನ್, ಶ್ರೀ ದುರ್ಗಾ ಸೆಕ್ಯುರಿಟಿ ಸರ್ವಿಸ್ ಮಹಾಂತೇಶ್, ಆನೇಕಲ್ ಅರಿವಿನ ಮಂದಿರದ ಸತೀಶ್‌ಜೀ, ಮತ್ತು ಎಸ್.ಎಸ್.ವೈ ಹಾಗೂ ಎಸ್.ಕೆ.ವೈನ ಯೋಗ ಬಂದುಗಳುಬಾಗವಹಿಸಿದ್ದರು.