ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಎನ್.ಸಿ.ಸಿ. ವಾಯುಪಡೆಯ ಘಟಕದಿಂದ ಯೋಗ ದಿನಾಚರಣೆ
ಸಂಜೆವಾಣಿ ವಾರ್ತೆ
ಹನೂರು ಜೂ 21 :- ಪಟ್ಟಣದ ಕ್ರಿಸ್ತರಾಜ ಪ್ರೌಢಶಾಲೆಯ ವಾಯುಪಡೆಯ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಶಾಲೆಯ ವಿದ್ಯಾರ್ಥಿಗಳು ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಎನ್.ಸಿ.ಸಿ ಅಧಿಕಾರಿಯಾದ ಮನೋಜ್ ಕುಮಾರ್ ರವರು, ದೈಹಿಕ ಶಿಕ್ಷಣ ಶಿಕ್ಷಕರು, ಹಾಗೂ ಮುಖ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗಾಸನ ಹಾಗೂ ಸೂರ್ಯ ನಮಸ್ಕಾರವನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಯಿತು.
ಭಾರತೀಯ ಎನ್.ಸಿ.ಸಿ ಘಟಕದ ಪ್ರಸಕ್ತ ಧ್ಯೇಯ ವಾಕ್ಯವಾದ ಯೋಗವು ಸ್ವಯಂ ವ್ಯಕ್ತಿಗತವಾಗಿ ಹಾಗೂ ಸಾಮಾಜಿಕವಾಗಿ ಉಪಯುಕ್ತವಾಗಿದ್ದು, ಇದು ಕೇವಲ ದಿನಾಚರಣೆಯಾಗದೆ ದಿನವೂ ಆಚರಣೆಯಾಗಬೇಕು, ನಮ್ಮ ದೈನಂದಿನ ಜೀವನದಲ್ಲಿ ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.