ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪೆÇ್ರೀತ್ಸಾಹಎಕಲಾರ ಸರ್ಕಾರಿ ಶಾಲೆಯಲ್ಲಿ ಜಾರಿಯಾದ ‘ಅಡ್ಮಿಶನ್ ಏಂಜೆಲ್’ ಯೋಜನೆ
(ವರದಿ : ಅಮರಸ್ವಾಮಿ ಸ್ಥಾವರಮಠ)
ಔರಾದ್ :ಜೂ.22: ಸರ್ಕಾರಿ ಶಾಲೆಗಳೆಂದರೇ ಮೂಗು ಮುರಿಯುವ ಇಂದಿನ ದಿನಗಳಲ್ಲಿ ತಾಲೂಕಿನ ಎಕಲಾರ ಪ್ರಾಥಮಿಕ ಶಾಲೆ ಕಳೆದ ಎರಡು ವರ್ಷಗಳಿಂದ ಒಂದಿಲ್ಲೊಂದು ಹೊಸ ಪ್ರಯೋಗಗಳ ಮೂಲಕ ಜನಸಾಮಾನ್ಯರ ಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿಗೆ ಕನ್ನಡದ ಜೊತೆ ಇಂಗ್ಲಿಷ್ ಮಾಧ್ಯಮದ ತರಗತಿಗಳು ಆರಂಭಿಸಿರುವ ಶಾಲೆಯು ಮಕ್ಕಳ ದಾಖಲಾತಿ ಹೆಚ್ಚಿಸಲು ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ “ಅಡ್ಮಿಶನ್ ಏಂಜೆಲ್” (ಅಪ್ಸರೆಯ ಪ್ರವೇಶ) ಎಂಬ ಹೆಸರಿನ ವಿನೂತನ ಯೋಜನೆ ಆರಂಭಿಸಿ ಶಿಕ್ಷಣ ಪ್ರೇಮಿಗಳ, ಪಾಲಕ ಪೆÇೀಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಎಲ್.ಕೆ.ಜಿ, ಯು.ಕೆ.ಜಿ, 1ನೇ ತರಗತಿಗಳಲ್ಲಿ ದಾಖಲಾದ ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಕಲಿಕಾ ಸಾಮಗ್ರಿಗಳ ಕಿಟ್ ಸಂಪೂರ್ಣ ಉಚಿತವಾಗಿ ನೀಡಲು ಮುಂದಾಗಿದೆ. ಅದರಲ್ಲಿ ಗುಣಮಟ್ಟದ ಶಾಲಾ ಬ್ಯಾಗ್, ವಾಟರ ಬಾಟಲ್, ಸ್ಲೇಟು, ನೋಟ್‍ಬುಕ್ಸ್, ಪೆನ್ಸಿಲ ಬಾಕ್ಸ್, ಬಣ್ಣದ ಪೆನ್ಸಿಲ ಬಾಕ್ಸ್, ಪೆನ್ನುಗಳು, ಚಿತ್ರಕಲಾ ನೋಟ್‍ಬುಕ್, ಅಂಕಲಿಪಿ ಸೇರಿದಂತೆ ಒಂದು ವರ್ಷಕ್ಕೆ ಅಗತ್ಯವಿರುವ ಎಲ್ಲ ಕಲಿಕಾ ಸಾಮಗ್ರಿಗಳು ಇರಲಿವೆ.
ಈ ಯೋಜನೆಯ ಫಲಾನುಭವಿ ಪ್ರತಿ ಮಗುವಿಗೆ 800-1000 ರೂ. ವೆಚ್ಚ ತಗಲುತ್ತಿದ್ದು, ಶಿಕ್ಷಕ ಬಾಲಾಜಿ ಅಮರವಾಡಿ ಭರಿಸಲು ಮುಂದಾಗಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಬೇಟಿ ಬಚಾವೋ ಬೇಟಿ ಪಢಾವೋ ಎಂಬಂತೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಓದುವಂತಹ ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆತು ಉತ್ತಮ ಶಿಕ್ಷಣ ಪಡೆದು ಗಡಿ ಭಾಗದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಶಿಕ್ಷಣ ಬಾಲಾಜಿ ಅಮರವಾಡಿ ಅವರ ಆಶಯವಾಗಿದೆ.
ಗುಣಮಟ್ಟದ ಶಿಕ್ಷಣದಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೆಸರುವಾಸಿಯಾದ ಎಕಲಾರ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿಗೆ ಯೋಜನೆಯ ಪರಿಣಾಮ ಎಲ್‍ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗೆ ಸುಮಾರು 40ಕ್ಕೂ ಅಧಿಕ ಮಕ್ಕಳು ದಾಖಲಾಗಿರುವುದು ವಿಶೇಷ. ನೆರೆಯ ತುಳಜಾಪೂರ್, ಬೋರಾಳ, ಕೊಳ್ಳುರ ಗ್ರಾಮದ ಮಕ್ಕಳು ಪ್ರತಿನಿತ್ಯ ಆಟೋ ಮೂಲಕ ಬಂದು ಹೋಗುತ್ತಿರುವುದು ಗ್ರಾಮದಲ್ಲಿ ಖಾಸಗಿ ಶಾಲಾ ವಾತಾವರಣ ಸೃಷ್ಟಿಯಾದಂತಾಗಿದೆ.
\ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು ಉತ್ಸಾಹದಿಂದ ಕೆಲಸ ಮಾಡಬೇಕಿದೆ. ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಯಿಂದ ದೇಶ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃಧಿಯಾಗುತ್ತದೆ. ಶಿಕ್ಷಕ ಬಾಲಾಜಿ ಅಮರವಾಡಿ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಮತ್ತು ಪ್ರತಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪ್ರೇರಣೆ ನೀಡುವಂಥ ಕೆಲಸ ಮಾಡಬೇಕು.
ಡಾ. ಟಿ.ಆರ್ ದೊಡ್ಡೆ,
ಕ್ಷೇತ್ರ ಶಿಕ್ಷಣಾಧಿಕಾರಿಗಳು ಔರಾದ (ಬಾ)
ಹೆಣ್ಣು ಮಕ್ಕಳ ಶಿಕ್ಷಣದಿಂದ ಸಮಾಜದಲ್ಲಿನ ಅಸಮಾನತೆ ದೂರಾಗಿ ಹೆಚ್ಚಿನ ಪ್ರಗತಿ ಸಾಧ್ಯ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಸಾಧಿಸಿ ಮುನ್ನಡೆಯಬೇಕು. ಇದಕ್ಕೆ ಸಮಾಜದ ಸಹಾಯ ಸಹಕಾರ ಅಗತ್ಯ ಎಂದು ನಂಬಿರುವೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇದೆ ಅದರ ಸದುಪಯೋಗ ಎಲ್ಲರೂ ಪಡೆಯಬೇಕು.
ಬಾಲಾಜಿ ಅಮರವಾಡಿ,
ಶಿಕ್ಷಕರು, ಎಕಲಾರ ಸರ್ಕಾರಿ ಶಾಲೆ