ಮಿಷನ್-2ಗೆ ಸಮಸ್ಯೆ ಎದುರಿಸುತ್ತಿರುವ ಪಂಚಾಯಿತಿಗಳು
ಸಂಜೆವಾಣಿ ನ್ಯೂಸ್
ಮೈಸೂರು.ಜೂ.22:- ಮೂಲಭೂತ ಸೌಲಭÀ್ಯಗಳ ಕೊರತೆ ಎದುರಿಸುತ್ತಿರುವ ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳನ್ನು ಸ್ವಚ್ಛ ಭಾರತ್ ಮಿಷನ್-2 ಯೋಜನೆಗೆ ಸೇರ್ಪಡೆಗೊಳಿಸಲು ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿರುವ ಶಾಸಕರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರು, ಬೀದಿ ದೀಪ, ಯುಜಿಡಿ ಸಮಸ್ಯೆ, ಸ್ವಚ್ಛತಾ ಕಾರ್ಯಕ್ಕೆ ಅನುದಾನ ಕೊರತೆ ಸೇರಿದಂತೆ ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಅಧಿಕಾರಿಗಳು ವಿವರಿಸಿದರು.
ಗ್ರಾಪಂನಿಂದ ಪಟ್ಟಣ ಪಂಚಾಯಿತಿ, ನಗರಸಭೆ ಮೇಲ್ದರ್ಜೇಗೇರಿಸಿದ ಮೇಲೆ ಸಾರ್ವಜನಿಕರಿಂದ ಸಂಗ್ರಹವಾಗುತ್ತಿರುವ ತೆರಿಗೆಯಿಂದ ನಿರ್ವಹಣೆ ಮಾಡಲಾಗಿದೆ. ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುದಾನದ ಕೊರತೆ ಇದೆ. ಯುಜಿಡಿ ಸಮಸ್ಯೆ ನಿವಾರಣೆಗೆ ಸರ್ಕಾರದ ಅನುದಾನ ಬೇಕಾಗಿದೆ ಎಂದು ಅಳಲು ತೋಡಿಕೊಂಡರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಸಿï ಮಾತನಾಡಿ, ಸ್ವಚ್ಛ ಭಾರತ್ ಮಿಷನ್ ಯೋಜನೆ-2ಗೆ ಹೂಟಗಳ್ಳಿ ನಗರಸಭೆ ಸೇರಿದೆ. ಉಳಿದ ನಾಲ್ಕು ಪಟ್ಟಣ ಪಂಚಾಯಿತಿಗಳನ್ನು ಸೇರಿಸಿದರೆ ಯುಜಿಡಿ ಸಂಪರ್ಕ ಕಲ್ಪಿಸಲು ಅನುದಾನ ದೊರೆಯಲಿದೆ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಜಿ¯್ಲÁ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ, ನಂಜನಗೂಡು, ಹುಣಸೂರು ಕೂಡ ಎಸ್‍ಬಿಎಂಗೆ ಸೇರಿದೆ. ಇವುಗಳನ್ನು ಸೇರಿಸಲು ಪ್ರಸ್ತಾಪ ಸಲ್ಲಿಸಬೇಕಿದೆ ಎಂದರು.
3ವರ್ಷದ ತೆರಿಗೆ ಸಂಗ್ರದ ಹಣ ಪಾವತಿಸಲಿ: ಮುಡಾದಿಂದ ಅನುಮೋದನೆಗೊಂಡು ರಚನೆ ಮಾಡಿರುವ 31 ಖಾಸಗಿ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನದ ಕೊರತೆ ಇರುವ ಕಾರಣ 3 ವರ್ಷದ ತೆರಿಗೆ ಸಂಗ್ರಹದ ಹಣ ಪಾವತಿಸಿದರೆ ಅನುಕೂಲವಾಗಲಿದೆ. ಮುಡಾದಿಂದ ಹಣ ಬಿಡುಗಡೆ ಮಾಡದಿದ್ದರೆ ಕಷ್ಟವಾಗಲಿದೆ ಎಂದು ಹೂಟಗಳ್ಳಿ ನಗರಸಭೆ ಆಯುಕ್ತ ಚಂದ್ರಶೇಖರ್ ಶಾಸಕರ ಗಮನಕ್ಕೆ ತಂದರು. ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ 31 ಬಡಾವಣೆಗಳಿದ್ದು, 9164 ನಿವೇಶನಗಳಿದ್ದು, ಅದರಲ್ಲಿ 4500 ಮನೆಗಳ ನಿರ್ಮಾಣವಾಗಿದೆ. ಕುಡಿಯುವ ನೀರು, ವಿದ್ಯುತ್ ದೀಪ, ಯುಜಿಡಿ, ರಸ್ತೆಗಳನ್ನು ಮಾಡಬೇಕಿದೆ. ಬಹುತೇಕ ಬಡಾವಣೆಗಳಲ್ಲಿ ಯುಜಿಡಿ ಸಮಸ್ಯೆ ಇದೆ. ಇದನ್ನು ನಿರ್ವಹಣೆ ಮಾಡಬೇಕಾದರೆ ಹಣವಿಲ್ಲ. ಸದ್ಯಕ್ಕೆ 10 ಕೋಟಿ ರೂ.ಕೊಡಿಸಿದರೆ ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಬಹುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ಮುಡಾದವರು ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡುವ ಮುನ್ನ ಮೂಲ ಸೌಕರ್ಯದ ಬಗ್ಗೆ ಗಮನಹರಿಸಲಿಲ್ಲ. ಜನರು ಈಗ ಮನೆಕಟ್ಟಿಕೊಂಡಿz್ದÁರೆ. ಯುಜಿಡಿ ಸಮಸ್ಯೆ ಹೇಳುತ್ತಿz್ದÁರೆ. ಈಗ ಕನಿಷ್ಠ ಹಣ ಕೊಡುವಂತೆ ಸೂಚನೆ ನೀಡಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಸಭೆಯಲ್ಲಿ ಹೂಟಗಳ್ಳಿ ನಗರಸಭೆ ಎಇಇ ಅಶ್ವಿನಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.