ಸದೃಢÀವಾದ ಶರೀರ ಮತ್ತು ಮನಸ್ಸು ಸಾಧನೆಗೆ ಯೋಗ ಹೆದ್ದಾರಿ:ಕೆಲೂರ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.22:ನಗರÀ ಹೊರ ವಲಯದಲ್ಲಿ ಇರುವ ಎಕ್ಸಲಂಟ್ ಆಂಗ್ಲ ಮಾದ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಪ್ರಸಿದ್ಧ ಯೋಗ ತರಬೇತಿದಾರ ಪರಶುರಾಮ ಕಲ್ಯಾಣಿ ಅವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಂಸ್ಥಾಪನಾ ಕಾರ್ಯದರ್ಶಿ ಡಾ. ಶಿವಾನಂದ ಕೆಲೂರ ಮಾತನಾಡಿ, ಯೋಗ ವಿದ್ಯಾರ್ಥಿಗಳಿಗೆ ಸದೃಢÀ ಶರೀರದೊಂದಿಗೆ ಸದೃಢÀವಾದ ಮನಸ್ಸನ್ನು ಹೊಂದಲು ಸಹಾಯಕಾರಿ. ಯಾವಾಗ ಮನಸ್ಸು ಸದೃಢÀವಾಗುತ್ತದೆಯೋ ಆಗ ಮಾತ್ರ ಜೀವನದಲ್ಲಿ ಪರಿಣಾಮಕಾರಿಯಾದ ಸಾಧನೆಯನ್ನು ಹೊಂದಲು ಸಾಧ್ಯವೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ತುಳಜಾರಾಮ ಸೂಕ್ತೆ, ಶಾಲೆಯ ಸಂಯೋಜಕÀ ಎನ್.ಜಿ. ಯರನಾಳ, ವೇದ ಅಕಾಡಮಿ ಶಾಲೆಯ ಮುಖ್ಯ ಗುರುಗಳಾದ ಸುನೀಲ ಬಿ.ಎಮ್, ಹಾಸ್ಟೇಲ್ ವಿಭಾಗದ ಮುಖ್ಯಸ್ಥ ಎಸ್.ಬಿ. ಹೆಗಲಾಡಿ ಅವರು ಪಾಲ್ಗೊಂಡಿದ್ದರು.
ಶಿಕ್ಷಕಿಯರಾದ ಕುಮಾರಿ ಐಶ್ವರ್ಯಾ ಹಾಗೂ ಸೂರ್ಯವಂಶಿ ಕಾರ್ಯಕ್ರಮವನ್ನು ನಿರೂಪಿಸಿದರು. ಐಜಾಜ್ ಜಮಾದಾರ ಗುರುಗಳು ವಂದಿಸಿದರು.