ಯೋಗ ನಮ್ಮ ಋಷಿಗಳು ಜಗತ್ತಿಗೆ ನೀಡಿದ ಕೊಡುಗೆ
ಕಲಬುರಗಿ:ಜೂ.21:”ತಲೆಮಾರುಗಳಿಂದ ಭಾರತವು ಆರೋಗ್ಯ ಮತ್ತು ಔಷಧದ ಭಾಗವಾಗಿ ಯೋಗವನ್ನು ಅನುಸರಿಸುತ್ತಿದೆ. ಇದು ನಮ್ಮ ಋಷಿಗಳು ಜಗತ್ತಿಗೆ ನೀಡಿದ ಕೊಡುಗೆಯಾಗಿದೆ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ಅವರು ಇಂದು ಸಿಯುಕೆಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಕಳೆದ ಹತ್ತು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಇದು ಆರೋಗ್ಯ ನಿರ್ವಹಣೆಯ ಭಾಗವಾಗಿ ಯೋಗದ ಮಹತ್ವವನ್ನು ತೋರಿಸುತ್ತದೆ. ನಾವು ಸಂತೋಷ ಮತ್ತು ಆರೋಗ್ಯಕರವಾಗಿರಲು ದಿನ ನಿತ್ಯ ಯೋಗದ ಅಭ್ಯಾಸವನ್ನು ಮಾಡಬೇಕು. ವಿಶೇಷವಾಗಿ ಯುವಕರು ಪ್ರತಿದಿನ ಕನಿಷ್ಠ ಒಂದು ಗಂಟೆ ಯೋಗಾಭ್ಯಾಸಕ್ಕೆ ಮೀಸಲಿಡಬೇಕು. ಏಕೆಂದರೆ ಯುವಕರು ದೇಶದ ಆಸ್ತಿ, ಯುವಕರ ಆರೋಗ್ಯ ರಾಷ್ಟ್ರೀಯ ಆರೋಗ್ಯ. ನಾವು ಯೋಗಾಭ್ಯಾಸ ಮಾಡದಿದ್ದರೆ ಔಷಧಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಯೋಗ ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಿಸುತ್ತದೆ. ಸಾಂಕೇತಿಕವಾಗಿ ಒಂದು ದಿನ ಯೋಗಾಭ್ಯಾಸ ಮಾಡುವುದು ಸಾಕಾಗುವುದಿಲ್ಲ; ಪ್ರತಿದಿನ ಅದನ್ನು ಅಭ್ಯಾಸ ಮಾಡಲು ಇಂದು ನಾವು ಪ್ರತಿಜ್ಞೆ ಮಾಡಬೇಕು” ಎಂದು ಅವರು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ ಮಾತನಾಡಿ, “ಹೃದಯಾಘಾತ, ಬಿಪಿ, ಶುಗರ್ ಸೇರಿದಂತೆ ಹಲವು ರೋಗಗಳನ್ನು ತಡೆಯುವ ಶಕ್ತಿ ಯೋಗಕ್ಕಿದೆ ಎಂದು ಅನೇಕ ತಜ್ಞರು ಹೇಳಿದ್ದಾರೆ. ಭಾರತೀಯ ಔಷಧ ಪದ್ಧತಿಯಲ್ಲಿ ವಿವಿಧ ಯೋಗಗಳಿವೆ ಮತ್ತು ಅμÁ್ಟಂಗ ಯೋಗವು ಒಂದಾಗಿದೆ. ನಾವು ಯೋಗವನ್ನು ದಿನನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು ಮತ್ತು ನಮ್ಮನ್ನು ಆರೋಗ್ಯವಾಗಿ ಮತ್ತು ಸಂತೋಷದಿಂದ ಇಟ್ಟುಕೊಳ್ಳಬೇಕು” ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಬಸವರಾಜ ಕುಬಕಡ್ಡಿ ಸ್ವಾಗತಿಸಿ ಮಾತನಾಡಿ, ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆಯು ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಅಂಗೀಕರಿಸಿದ್ದು, ಜಗತ್ತಿನಾದ್ಯಂತ 177 ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತಿವೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ” ಎಂದು ಹೇಳಿದರು.
ಡಾ. ರಾಜೀವ್ ಜೋಶಿ ಕಾರ್ಯಕ್ರಮ ನಿರೂಪಿಸಿದರು; ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡ ಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಯೋಗ ತರಬೇತುದಾರರಾದ ಜೊತ್ಸ್ನಾ ಮತ್ತು ಡಾ.ಸಂತೋಷ, ಕಾರ್ಯಕ್ರಮದ ಸಂಯೋಜಕರಾದ ಪೆÇ್ರ.ಜಿ.ಆರ್.ಅಂಗಡಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಪೆÇ್ರ.ಎಂ.ಎಸ್.ಪಾಸೋಡಿ, ಪೆÇ್ರ.ಬಸವರಾಜ ಡೋಣೂರು, ಪೆÇ್ರ.ವಿಕ್ರಂ ವಿಸಾಜಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.