ತಾವರಗೇರಾ ಗ್ರಾಮದ ಅಮೃತ ಸರೋವರ ಕೆರೆ ಸ್ಥಳದಲ್ಲಿಅಂತರರಾಷ್ಟ್ರೀಯ ಯೋಗ ದಿನ ಆಚರಣೆ
ಕಲಬುರಗಿ:ಜೂ.21:ಕಲಬುರಗಿ ತಾಲ್ಲೂಕಿನ ಹರಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಾವರಗೇರಾ ಗ್ರಾಮದ ಅಮೃತ ಸರೋವರ ಕೆರೆ ಸ್ಥಳದಲ್ಲಿ ಶನಿವಾರ ಹತ್ತನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ. ಸೈಯದ ಪಟೇಲ್ ಅವರು ಮಾತನಾಡಿ, ಮುಂಜಾನೆ ಯೋಗ ಮಾಡುವ ಮುಖಾಂತರ ತಮ್ಮ ಭೌತಿಕ ಬೆಳವಣಿಗೆ ಮತ್ತು ಶರೀರಿಕ ಬೆಳವಣಿಗೆ ಬುದ್ದಿ ಶಕ್ತಿ ಹೆಚ್ಚಿಸಲು ಸಹಾಯಕವಾಗುವುದು ಎಂದರು.
ಕಲಬುರಗಿ ತಾಲೂಕು ಪಂಚಾಯತ್ (ಪಂ.ರಾ.) ಸಹಾಯಕ ನಿರ್ದೇಶಕ ವಿಶ್ವನಾಥ ಎಮ್.ವೈ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾದಂಡೆ, ಅಧ್ಯಕ್ಷರಾದ ಮಹಮದ್ ಹನೀಫ್ ಎಂ. ಮುಲ್ಲಾ ಹಾಗೂ ಸರ್ವ ಸದಸ್ಯರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಶಾಲೆಯ ಮಕ್ಕಳು ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.
ನರೇಗಾ ಐ.ಇ.ಸಿ. ಮೋಸಿನ್ ಖಾನ್, ಗ್ರಾಮದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು, ಸರ್ಕಾರಿ ಪ್ರೌಢಶಾಲೆಯ ಉರ್ದು ಮತ್ತು ಕನ್ನಡ ಮುಖ್ಯ ಉಪಾಧ್ಯಾಯರು ಉಪಸ್ಥಿತರಿದ್ದರು.