ಕಲಬುರಗಿ ಕೇಂದ್ರ ಕಾರಾಗೃಹದಲ್ಲಿಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ
ಕಲಬುರಗಿ:ಜೂ.21: ಹತ್ತನೇ ಅಂತರÀರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಪಿ. ರಂಗನಾಥ ಅವರು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಜೀವನ ಎಂಬ ಚಕ್ರದಲ್ಲಿ ಯೋಗ ಮಹತ್ವದ್ದಾಗಿದೆ. ಯೋಗ ಕೇವಲ ಎರಡು ಅಕ್ಷರವಲ್ಲ, ಕುಗ್ಗಿದ ದೇಹಕ್ಕೆ ಶಕ್ತಿ ತುಂಬುವ ಯೋಗ, ಜಿಗುಪ್ಸೆ ಹುಟ್ಟಿದ ಮನಸ್ಸಿಗೆ ಹುರುಪು ಕೊಡುವುದು ಯೋಗ, ಮೌನವಾದ ಮನಸ್ಸಿಗೆ ಮನಸ್ಸಿನ ಮಹಿಮೆ ತಿಳಿಸುವುದೇ ಯೋಗ. ಪ್ರತಿಯೊಬ್ಬರು ಯೋಗಾಸನ ಮಾಡಬೇಕು. ಯೋಗ ಕೇವಲ ಜೂನ್-21 ಕ್ಕೆ ಸೀಮಿತವಲ್ಲ ಅದು ಜಗತ್ತಿನ ಪ್ರತಿ ಜೀವರಾಶಿಗೆ ಪ್ರತಿದಿನ ಸಂಬಂಧಪಟ್ಟಿದ್ದಾಗಿದೆ. ಹುಟ್ಟಿದ ಮಗುವಿನ ಹಿಡಿದು ಸಾಯುವವರೆಗೂ ಯೋಗ ಪರಿಣಾಮಕಾರಿ ಎಂಬುವುದನ್ನು ಒಂದು ಸಣ್ಣ ಕವನದ ಮೂಲಕ ಹೇಳಿದರು. 2024 ನೇ ಸಾಲಿನ ಯೋಗ ದಿನದ ಘೋಷಣೆಯಾದ “Womeಟಿ ಇmಠಿoತಿeಡಿmeಟಿಣ (ಮಹಿಳಾ ಸಬಲೀಕರಣ)” ಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.
ಕಲಬುರಗಿ ಕೇಂದ್ರ ಕಾರಾಗೃಹದ ಕಚೇರಿ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ಹಾಗೂ ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಬಿ. ಸುರೇಶ ಮಾತನಾಡಿದರು. ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಎಲ್.ವಿ. ಕುಲಕರ್ಣಿ ಹಾಗೂ ಶ್ರೀನಿವಾಸ ಅವರು ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜೈಲರರಾದ ಸುನಂದ ವಿ., ಸೈನಾಜ್ ಎಂ. ನಿಗೇವಾನ್, ಸಾಗರ ಪಾಟೀಲ್, ಪರಮಾನಂದ ಹರವಾಳ, ಕೇಂದ್ರ ಕಾರಾಗೃಹದ ಬಂದಿಗಳು, ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು.