ಕರ್ನಾಟಕ ಉಚ್ಫನ್ಯಾಯಾಲಯ ಕಲಬುರಗಿ ಪೀಠದಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಕಲಬುರಗಿ:ಜೂ.21: ಕರ್ನಾಟಕ ಉಚ್ಫನ್ಯಾಯಾಲಯ ಪೀಠ ಕಲಬುರಗಿ ಮತ್ತು ಗುಲಬರ್ಗಾ ನ್ಯಾಯವಾದಿಗಳ ಸಂಘ,ಕಲಬುರಗಿರವರ ಸಹಯೋಗದೊಂದಿಗೆ ಶುಕ್ರವಾರದಂದು ನ್ಯಾಯಾಲಯದ ಆವರಣದಲ್ಲಿ 10ನೇ ಅಂತರಾಷ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಈ ಒಂದು ಯೋಗ ಕಾರ್ಯಕ್ರಮದಲ್ಲಿ ಹೈಕೋರ್ಟ್ ಕಲಬುರಗಿ ಪೀಠದ ಹಿರಿಯ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಗೌರವಾನ್ವಿತ ನ್ಯಾಯಮೂರ್ತಿಗಳಾದ ಆರ್,ನಟರಾಜ್, ಗೌರವಾನ್ವಿತ ನ್ಯಾಯಮೂರ್ತಿಗಳಾದ ಎಸ್,ವಿಶ್ವಜಿತ್ ಶೆಟ್ಟಿ. ಗೌರವಾನಿತ್ವ ನ್ಯಾಯಮೂರ್ತಿಗಳಾದ ಶ್ರೀಮತಿ ಕೆ.ಎಸ್.ಹೇಮಲೇಖಾ. ಗೌರವಾನಿತ್ವ ನ್ಯಾಯಮೂರ್ತಿಗಳಾದ ಉಮೇಶ ಎಂ.ಅಡಿಗ ಹಾಗೂ ಗೌರವಾನಿತ್ವ ನ್ಯಾಯಮೂರ್ತಿಗಳಾದ ರಾಜೇಶ್ ರೈ,ಕೆ ರವರಗಳು ಹಾಗೂ ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಗುಪ್ತಲಿಂಗ ಎಸ್. ಪಾಟೀಲ ಉಪಾಧ್ಯಕ್ಷ ಅಶೋಕ ಬಿ ಮೂಲಗೆ ಸೇರಿದಂತೆ ಇತರೆ ಪದಾಧಿಕಾರಿಗಳು,ಹೆಚ್ಚುವರಿ ಅಡ್ವೊಕೇಟ್ ಜನರಲ್,ಹಿರಿಯ ಕಿರಿಯ ನ್ಯಾಯವಾದಿಗಳು ಹಾಗೂ ಕಲಬುರಗಿ ಪೀಠದ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.